ದಿನಾಂಕ 20/03/2024 ರಂದು ಹೊಸಪೇಟೆಯ ಪಟೇಲ್ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ “ವಿಜಯನಗರ ಜಿಲ್ಲಾ ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ” ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯನಗರ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಚೆನ್ನಬಸವನಗೌಡ ಪಾಟೀಲ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಕಿಚಡಿ ಕೊಟ್ರೇಶ್ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ, ಹೊಸಪೇಟೆ ಮಂಡಲ ಅಧ್ಯಕ್ಷರಾದ ಶಂಕರ್ ಮೇಟಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಅಡವಿ ಸ್ವಾಮಿ ಹಿರೇಮಠ್ ಅವರು ಭಾಗವಹಿಸಿ ಯುವ ಮೋರ್ಚಾದ ಕಾರ್ಯಗಳ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್ ಕುಮಾರ್ ಹಾಗೂ ವಿನೋದ್ ಜಾಧವ್, ಜಿಲ್ಲಾ ಯುವಮೋರ್ಚಾ ಘಟಕದ ಉಪಾಧ್ಯಕ್ಷರುಗಳು,ಖಜಾಂಚಿ, ಹಾಗೂ ಎಲ್ಲಾ ಪದಾಧಿಕಾರಿಗಳು,ಕಾರ್ಯಕಾರಿಣಿ ಸದಸ್ಯರು, ಎಲ್ಲಾ ಮಂಡಲಗಳ ಅಧ್ಯಕ್ಷರು ಕಾರ್ಯದರ್ಶಿಗಳು, ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಹಾಜರಿದ್ದರು.
On 20/03/2024 “Vijayanagar District Yuva Morcha Special Executive Meeting” was held at BJP office at Patel Nagar, Hospet.
The program was inaugurated by Vijayanagar BJP District President Chennabasavanagowda Patil. District Youth Morcha President Kichadi Kotresh presided over the program. District General Secretary Raghavendra, Hospet Mandal President Shankar Meti were present as chief guests.
Adavi Swami Hiremath, State Secretary of Yuva Morcha, participated in this program and told about the activities of Yuva Morcha. On this occasion, District General Secretaries Sachin Kumar and Vinod Jadhav, Vice Presidents of District Yuva Morcha Unit, Treasurer, and all the office bearers, executive members, presidents, secretaries, office bearers and executive members of all mandals were present.