ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಮೇಲೆ ಬಿ.ಶ್ರೀರಾಮುಲು ಅವರು ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ದಿನಕ್ಕೊಂದು ತಾಲ್ಲೂಕಿನಂತೆ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಮಾರ್ಚ್ 28, 2024ರಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮತಭಾಂದವರನ್ನು ಭೇಟಿ ಮಾಡಿ ಮತಯಾಚನೆ ನಡೆಸಿದ್ದು ಅವರ ಸಂಪೂರ್ಣ ಪ್ರಚಾರ ಪ್ರವಾಸವು ಹೇಗಿತ್ತು ಎನ್ನುವುದರ ಮಾಹಿತಿ ಇಲ್ಲಿದೆ. ಮುಂದೆ ಓದಿ..!!  

ಬೆಳಗ್ಗೆ 9.30ಕ್ಕೆ ಸರಿಯಾಗಿ ಹೂವಿನಹಡಗಲಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಸೊಲ್ಲಮ್ಮ ದೇವಿಗೆ ಆಶೀರ್ವಾದ ಪಡೆಯುವ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸಿದರು. ಶ್ರೀರಾಮುಲು ಅವರಿಗೆ ಸಾಥ್ ನೀಡಿದ ಹೂವಿನಹಡಗಲಿಯ ಶಾಸಕರಾದ ಮಾನ್ಯ ಕೃಷ್ಣ ನಾಯ್ಕ್ ಹಾಗೂ ಬಿಜೆಪಿಯ ಪ್ರಮುಖ ಮುಖಂಡರಾದ ಓದೋ ಗಂಗಪ್ಪ ಅವರು ಮತಭಾಂದವರಲ್ಲಿ ಶ್ರೀರಾಮುಲು ಅವರಿಗೆ ಮತ ಹಾಕುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಬಾರೀ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.

ನಂತರ 10.30ಕ್ಕೆ ಮೋರಿಗೇರಿ ಗ್ರಾಮಕ್ಕೆ ತೆರಳಿದ ಶ್ರೀರಾಮುಲು ಅವರು ಮತಯಾಚನೆ ನಡೆಸಿ ಗದ್ದಿಕೇರಿ ಗ್ರಾಮಕ್ಕೆ ತೆರಳಿದರು. ಗದ್ದಿಕೇರಿ ಗ್ರಾಮದಲ್ಲಿ ಶ್ರೀರಾಮುಲು ಅವರನ್ನು ಅದ್ದೂರಿಯಾಗಿ ಆಗಮಿಸಿಕೊಂಡ ಅಲ್ಲಿನ ಗ್ರಾಮಸ್ಥರು ಈ ಬಾರಿಯ ಚುನಾವಣೆಯಲ್ಲಿ ರಾಮುಲು ಅವರಿಗೆ ತಾವುಗಳೆಲ್ಲ ಮತ ಹಾಕಿ ಗೆಲ್ಲಿಸಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುತ್ತೇವೆಂದು ಹೇಳುವುದರ ಮೂಲಕ ರಾಮುಲು ಅವರಿಗೆ ಭರವಸೆ ನೀಡಿದರು.

ಮೋರಿಗೇರಿ

ಗದ್ದಿಕೇರಿ

ನಂತರ ಮಾರ್ಗಮಧ್ಯೆ ಬನ್ನಿಕಲ್ಲು ಗ್ರಾಮದಲ್ಲಿ ಮತಯಾಚನೆ ನಡೆಸಿದ ಶ್ರೀರಾಮುಲು ಅವರು ಹಂಪಸಾಗರಕ್ಕೆ ತೆರಳಿ ಶಾಸಕರಾದ ಶ್ರೀ ಕೃಷ್ಣ ನಾಯ್ಕ್, ಜಿಲ್ಲಾಧ್ಯಕ್ಷರಾದ ಶ್ರೀ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಓದೋ ಗಂಗಪ್ಪ,ಹೂವಿನಹಡಗಲಿ ಜೆ.ಡಿ.ಎಸ್ ಪಕ್ಷದ ಮುಖಂಡರಾದ ಪುತ್ರೇಶ್ ಸೇರಿದಂತೆ ಪಕ್ಷದ ವಿವಿಧ ಪ್ರಮುಖರೊಂದಿಗೆ ಮತಯಾಚನೆ ನಡೆಸಿದರು

ಹಂಪಸಾಗರ

ಹಂಪಸಾಗರದಲ್ಲಿ ಮತಯಾಚನೆ ನಡೆಸಿ ನಂತರ ಸೋವೇನಹಳ್ಳಿ, ಹಿರೇಮಲ್ಲನಕೇರಿ, ಕೊಂಬಳಿ ಹಾಗೂ ನವಲಿ ಗ್ರಾಮಗಳಲ್ಲಿ ಪ್ರಚಾರ ಮುಗಿಸಿದ ಶ್ರೀರಾಮುಲು ಅವರು ಮತಭಾಂದವರಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ ಮಾಡಿಕೊಂಡರು. ಇದರೊಂದಿಗೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ಪ್ರಚಾರ ಕಾರ್ಯವನ್ನು ಸಂಪೂರ್ಣಗೊಳಿಸಿದರು.

ಹಿರೇಬನ್ನಿಮಟ್ಟಿ

ಹೂವಿನಹಡಗಲಿಯಲ್ಲಿ ಶ್ರೀರಾಮುಲು ಅವರ ಪ್ರಚಾರದ ಹಿನ್ನೋಟ

Share Now