ಮಾರ್ಚ್ 31,2024ರಂದು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಂಡಿಹಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ  ಬಂಡಿಹಟ್ಟಿ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಾವಳಿಯಲ್ಲಿ ಬಿಜೆಪಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀರಾಮುಲು ಅವರು ಭಾಗಿಯಾಗಿ ಯುವಕರ ಜೊತೆಯಲ್ಲಿ ಕೆಲ ಸಮಯ ಕಳೆದರು. ಈ ವೇಳೆ ಕ್ರಿಕೆಟ್ ಆಟದಲ್ಲಿ ಸೋಲು ಗೆಲುವು ಸಹಜವಾಗಿದ್ದು ಈ ಪಂದ್ಯಾವಳಿಯ ಫಲಿತಾಂಶವನ್ನು ಸ್ಪೂರ್ತಿ ಮತ್ತು ಸಂತೋಷದಿಂದ  ಸ್ವೀಕರಿಸಬೇಕೆಂದು ಆಟಗಾರರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎಂ.ಗೋವಿಂದರಾಜಲು, ಕೌಲ್ ಬಜಾರ್ ಮಂಡಲ ಅಧ್ಯಕ್ಷರಾದ ನಾಗರಾಜ್ ರೆಡ್ಡಿ, ಗ್ರಾಮದ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳಿಯ ನಾಯಕರು ಉಪಸ್ಥಿತರಿದ್ದರು.

On March 31, 2024, BJP Ballari Lok Sabha Constituency Candidate Sriramulu participated in the Bandihatti Premier League Final Tournament at Bandihatti Village of Bellary Rural Assembly Constituency and spent some time with the youth. He advised the players to accept the result of this tournament with enthusiasm and joy as victory and defeat are natural in the game of cricket.

On this occasion, Mahanagara Palika member M. Govindarajalu, Kaul Bazar Mandal President Nagaraj Reddy, village leaders, party workers and local leaders were present.

Share Now