ದಿನಾಂಕ 17/03/2024ರಂದು  ಭಾರತೀಯ ಜನತಾ ಪಕ್ಷದ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಿ.ಶ್ರೀರಾಮುಲು ಅವರು ಬಳ್ಳಾರಿಯ ಆವಂಭಾವಿಯಲ್ಲಿರುವ ತಮ್ಮ ನಿವಾಸದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 49 ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಪಾರಿವಾಳ ಹಾರಿಬಿಡುವ ಮೂಲಕ ಆಚರಿಸಿದರು. 
 
ನಂತರ ಬಳ್ಳಾರಿಯಿಂದ ಹೊಸಪೇಟೆಗೆ ಆಗಮಿಸಿ ಪುನೀತ್ ರಾಜಕುಮಾರ್ ಸರ್ಕಲ್ ಅಲ್ಲಿರುವ ಅಪ್ಪು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನೆರೆದಿದ್ದ ಎಲ್ಲಾ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿದರು.
 
ನಂತರ ಮಾರ್ಗಮಧ್ಯೆ ಬೀದಿಬದಿಯ ಚಹಾ ಅಂಗಡಿಯಲ್ಲಿ ಚಹಾ ಸೇವಿಸಿ ಬೀದಿಬದಿ ವ್ಯಾಪಾರಿಗಳ ಮನವಿಯನ್ನು ಸ್ವೀಕರಿಸಿದರು.  

ನಂತರ  ಹೊಸಪೇಟೆ ಹಾಗೂ ಕೂಡ್ಲಿಗಿ ತಾಲೂಕಿನ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ನೂತನ ಜೋಡಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.

On 17/03/2024 Bharatiya Janata Party’s BJP candidate for Ballari Lok Sabha constituency B.Sreeramulu celebrated Power Star Puneeth Rajkumar’s 49th birthday by cutting a cake and flying a dove at his residence in Avambhavi, Bellary.

Later he arrived at Hospet from Bellary and celebrated his birthday with all the fans by garlanding Appu’s statue at Puneeth Rajkumar Circle.

Later, on the way, he accepted the request of the street vendors by having tea at a roadside tea shop.

Later, he participated in the marriage ceremony of Hospet and Kudligi Taluk and wished the new couple well.

Local leaders and others were present on the occasion.

Share Now