ದೇಶದ ಜನತೆಯ ಒಳಿತಿಗಾಗಿ ಮೋದಿ ಸರ್ಕಾರವು 2017 ರಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಬಳಸಿಕೊಂಡು ಕೋಟ್ಯಾನು ಕೋಟಿ ಭಾರತೀಯರು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಅದೆಷ್ಟೋ ಜನಗಳಿಗೆ ಮೋದಿ ಸರ್ಕಾರದ ಅನೇಕ ಯೋಜನೆಗಳ ಕುರಿತು ಸರಿಯಾಗಿ ಮಾಹಿತಿ ಸಿಗದೆ ಮೋದೀಜೀ ಅವರು ದೇಶದ ಪ್ರಗತಿಗೆ ಏನೂ ಕೆಲಸ ಮಾಡಿಲ್ಲವೆಂದು ಹೇಳುತ್ತಾರೆ. ಆದ್ದರಿಂದ ಈ ಲೇಖನದಲ್ಲಿ ಮೋದಿ ಸರ್ಕಾರದ ಯೋಜನೆಗಳು ಮತ್ತು ಆ ಯೋಜನೆಗಳ ಸದುಪಯೋಗ ಪಡೆದುಕೊಂಡ ಪಲಾನುಭವಿಗಳ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ.
2017 ರಲ್ಲಿ ಜಾರಿಗೆ ತಂದ ಯೋಜನೆಗಳು
1 – ರಾಷ್ಟ್ರೀಯ ವಯೋಶ್ರೀ ಯೋಜನೆ
ಆರ್ಥಿಕವಾಗಿ ಸಬಲರಾಗಿರುವವರು ತಮ್ಮ ಕುಟುಂಬಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಸುಲಭವಾಗಿ ಪಡೆಯುತ್ತಾರೆ. ಆದರೆ ಆರ್ಥಿಕವಾಗಿ ದುರ್ಬಲರಾದವರು ಕನಿಷ್ಠ ಸೌಲಭ್ಯ ಪಡೆಯಲೂ ಕಷ್ಟ ಪಡಬೇಕಾಗುತ್ತದೆ. ಹೀಗಾಗಿ ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ವಿವಿಧ ರೀತಿಯ ಸೌಲಭ್ಯ ಒದಗಿಸಲೆಂದೇ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಈ ಪೈಕಿ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ ಕೂಡ ಒಂದು. ಆರ್ಥಿಕವಾಗಿ ದುರ್ಬಲರಾಗಿರುವ ವೃದ್ಧರಿಗಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು 2017ರ ಏಪ್ರಿಲ್ 1 ರಂದು ಜಾರಿಗೆ ತಂದಿತು. ರಾಷ್ಟ್ರೀಯ ವಯೋಶ್ರೀ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಹಿರಿಯ ನಾಗರಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಆರಂಭಿಸಿರುವ ಯೋಜನೆಯಾಗಿದೆ. ಈ ಯೋಜನೆಯಡಿ ಆರ್ಥಿಕವಾಗಿ ದುರ್ಬಲವಾಗಿರುವ ಯಾವುದೇ ವೃದ್ಧರಿಗೆ ಗಾಲಿಕುರ್ಚಿ ಮೊದಲಾದ ಸಹಾಯಕ ಉಪಕರಣಗಳನ್ನು ಅಗತ್ಯಕ್ಕೆ ಅನುಗುಣವಾಗಿ ಉಚಿತವಾಗಿ ವಿತರಿಸಲಾಗುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಈ ಯೋಜನೆಯಡಿ, ಆರ್ಥಿಕವಾಗಿ ದುರ್ಬಲವಾಗಿರುವ ಹಿರಿಯ ನಾಗರಿಕರಿಗೆ ಅವರ ಅಂಗವೈಕಲ್ಯ ಮತ್ತು ದೌರ್ಬಲ್ಯದ ಆಧಾರದ ಮೇಲೆ ಉಚಿತ ಉಪಕರಣಗಳನ್ನು ನೀಡಲಾಗುತ್ತದೆ.
ಈ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆ ಎನಿಸಿದರೂ, ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಇದು ಪ್ರಮುಖ ಯೋಜನೆಯಾಗಿದೆ. ಶ್ರೀಮಂತ ಅಥವಾ ಬಡವನಿರಲಿ ಪ್ರತಿಯೊಬ್ಬ ವ್ಯಕ್ತಿಗೆ ಅಗತ್ಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಯಿತು. ಇದುವರೆಗೆ ಲಕ್ಷಾಂತರ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಮತ್ತು ಇನ್ನೂ ಪಡೆಯುತ್ತಿದ್ದಾರೆ.
ಯೋಜನೆಯ ಪ್ರಯೋಜನ ಪಡೆಯಲು ಅರ್ಹತೆಗಳು :
- ರಾಷ್ಟ್ರೀಯ ವಯೋಶ್ರೀ ಯೋಜನೆಯ ಲಾಭ ಪಡೆಯಲು ಕೆಲವು ಅರ್ಹತೆಗಳನ್ನುನಿಗದಿಪಡಿಸಲಾಗಿದೆ. ಅವುಗಳೆಂದರೆ,
- ಭಾರತೀಯ ನಿವಾಸಿಗಳು ಮಾತ್ರ ಯೋಜನೆಯ ಪ್ರಯೋಜನ ಪಡೆಯಬಹುದು.
- 60 ವರ್ಷ ಮೇಲ್ಪಟ್ಟ ನಾಗರಿಕರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ.
- ಆರ್ಥಿಕವಾಗಿ ದುರ್ಬಲವಾಗಿರುವ ಹಿರಿಯ ನಾಗರಿಕರು ಅಂದರೆ, ಬಿಪಿಎಲ್ ಮತ್ತು ಎಪಿಎಲ್ ವರ್ಗದವರು ಈ ಯೋಜನೆಗೆ ಅರ್ಹರು.
ಅಗತ್ಯ ದಾಖಲೆಗಳು
ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಗುರುತಿನ ಚೀಟಿ, ಪಡಿತರ ಚೀಟಿ, ವೃತ್ತಿ ಪಿಂಚಣಿ ಸಂಬಂಧಿತ ದಾಖಲೆಗಳು (ಪ್ರಯೋಜನವನ್ನು ಪಡೆಯುತ್ತಿದ್ದರೆ), ಅಂಗವೈಕಲ್ಯ / ಅಶಕ್ತತೆಯ ವೈದ್ಯಕೀಯ ವರದಿ ಇತ್ಯಾದಿ ದಾಖಲೆಗಳೊಂದಿಗೆ, ಮೊಬೈಲ್ ಸಂಖ್ಯೆ ಮತ್ತು ಪಾಸ್ಪೋರ್ಟ್ ಅಳತೆಯ ಫೋಟೋ ಹೊಂದಿರಬೇಕು.
ರಾಷ್ಟ್ರೀಯ ವಯೋಶ್ರೀ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
- ಮೊದಲಿಗೆ ಯೋಜನೆ ಜಾರಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ https://www.alimco.in/ ಗೆ ಭೇಟಿ ನೀಡಿ.
- ವೆಬ್ಸೈಟ್ನ ಮುಖಪುಟದಲ್ಲಿ ಕಾಣಿಸುವ ‘ವಯೋಶ್ರೀ ನೋಂದಣಿ’ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಯೋಜನೆಯ ನೋಂದಣಿ ನಮೂನೆ ತೆರೆದುಕೊಳ್ಳುತ್ತದೆ. ಅದರಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಬೇಕು. ನಂತರ ಸಲ್ಲಿಸು (ಸಬ್ಮಿಟ್) ಬಟನ್ ಕ್ಲಿಕ್ ಮಾಡಿ.
ಇದುವರೆಗೂ ಈ ಯೋಜನೆಯ ಲಾಭವನ್ನು ದೇಶದಲ್ಲಿ 2,88,928 ಜನರು ಪಡೆದುಕೊಂಡಿದ್ದಾರೆ. ಇನ್ನು ರಾಜ್ಯವಾರು ಎಷ್ಟು ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ ಎನ್ನುವುದನ್ನು ತಿಳಿಯಲು ಕೆಳಗಿರುವ ಲಿಂಕ್ ಕ್ಲಿಕ್ ಕ್ಲಿಕ್ ಮಾಡಿ.
2 – ಉಡಾನ್ ಯೋಜನೆ
ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆ ತರುವ ಉದ್ದೇಶದೊಂದಿಗೆ ಮೋದಿ ಸರ್ಕಾರ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು ಏಪ್ರಿಲ್ 27, 2017 ರಂದು ಜಾರಿಗೆ ತಂದಿತು. ಈ ಯೋಜನೆಯಡಿ ದೇಶಾದ್ಯಂತ ಪ್ರಾದೇಶಿಕ ವಾಯುಯಾನ ಸೌಲಭ್ಯಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರತಿ 800 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನಯಾನ ಕಲ್ಪಿಸುವ ಮೂಲಕ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲಾಗುತ್ತಿದೆ.
ನೆರೆಯ ದೇಶಗಳಿಗೆ ಜನಸಾಮಾನ್ಯರೂ ಕಡಿಮೆ ದರದಲ್ಲಿ ಹಾರಾಟ ನಡೆಸಲು ಸಾಧ್ಯವಾಗುವಂತೆ ಸರಕಾರ ಈ 8 ಮಾರ್ಗಗಳನ್ನು ಗುರುತಿಸಿದೆ. ಗುವಾಹಟಿಯಿಂದ ಢಾಕಾ, ಕಠ್ಮಂಡು, ಯಾಂಗೂನ್, ಕೌಲಾಲಂಪುರ, ಸಿಂಗಾಪುರ ಮತ್ತು ಬ್ಯಾಂಕಾಕ್ ಮಾರ್ಗಗಳಲ್ಲಿ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆ ಜಾರಿಯಾಗಲಿದೆ. ಅಲ್ಲದೆ ವಿಜಯವಾಡದಿಂದ ಸಿಂಗಾಪುರ ಮತ್ತು ದುಬೈಗಳಿಗೂ ಉಡಾನ್ ವಿಮಾನಗಳು ಹಾರಲಿವೆ.
ಯೋಜನೆಯ ಪ್ರಮುಖ ಅಂಶಗಳು :
- 800 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನ ಯಾನ ಕಲ್ಪಿಸುವ ಮೂಲಕ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಆಗಲಿದೆ.[ಹವಾಯಿ ಚಪ್ಪಲಿ ಹಾಕುವವರೂ ವಿಮಾನ ಯಾನ ಮಾಡಬೇಕು: ನರೇಂದ್ರ ಮೋದಿ] * ದೇಶದ 43 ನಗರಗಳಲ್ಲಿ ವಿಮಾನ ಪ್ರಯಾಣ ವ್ಯವಸ್ಥೆ ಮೂಲಕ ತಲುಪುವ ಅನುಕೂಲ ಮಾಡಲಾಗುತ್ತದೆ. ಹನ್ನೆರಡು ವಿಮಾನ ನಿಲ್ದಾಣಗಳಲ್ಲಿ ನಿಯಮಿತವಾಗಿ, ಅಪರೂಪಕ್ಕೆ ವಿಮಾನ ಹಾರಾಟ ನಡೆಸುತ್ತಿರುವುದು ಇನ್ನು ಮುಂದೆ ಸಮಯಕ್ಕೆ ಹಾರಾಟ ನಡೆಸುತ್ತದೆ. ಸದ್ಯಕ್ಕೆ ವಿಮಾನ ನಿಲ್ದಾಣ ಇದ್ದು, ಹಾರಾಟ ನಡೆಸದ ಮೂವತ್ತೊಂದು ಸ್ಥಳಗಳಲ್ಲಿ ಚಟುವಟಿಕೆ ಆರಂಭವಾಗುತ್ತದೆ.
- ಏರ್ ಇಂಡಿಯಾದ ಸಹವರ್ತಿ ಅಲಯನ್ಸ್ ಏರ್ ಮೊದಲ ಬಾರಿಗೆ ಪ್ರಾದೇಶಿಕ ಸಂಪರ್ಕ ಯೋಜನೆ (ರೀಜನಲ್ ಕನೆಕ್ಟವಿಟಿ ಸ್ಕೀಮ್) ಅಡಿ ದೆಹಲಿ-ಶಿಮ್ಲಾ ಮಧ್ಯೆ ವಿಮಾನ ಯಾನ ಆರಂಭಿಸಿದೆ. ಆಲಯನ್ಸ್ ಏರ್ ಏಪ್ರಿಲ್ 28ರಿಂದ ನಲವತ್ತೆಂಟು ಸೀಟಿನ, ಎಕಾನಮಿ ಕ್ಲಾಸ್ ನ ವಿಮಾನ ಹಾರಾಟವನ್ನು ನಿರಂತರವಾಗಿ ನಡೆಸಲಿದೆ. * ಕಡಿಮೆ ವಿಸ್ತಾರದ ರನ್ ವೇ, ಎತ್ತರ ಹಾಗೂ ತಾಪಮಾನದ ನಿರ್ಬಂಧ ಇರುವುದರಿಂದ ನಲವತ್ತೆಂಟಕ್ಕಿಂತ ಹೆಚ್ಚು ಪ್ರಯಾಣಿಕರಿಗಿಂತ ವಿಮಾನದಲ್ಲಿ ಕರೆದೊಯ್ಯಲು ಸಾಧ್ಯವಿಲ್ಲ. ದೆಹಲಿ-ಶಿಮ್ಲಾ ಮಧ್ಯೆ ವಿಮಾನ ಯಾನದಲ್ಲಿ ಮೂವತ್ತೈದು ಮಂದಿಯನ್ನು ಕರೆದೊಯ್ಯುವ ವಿಮಾನ, ವಾಪಸ್ ಬರುವಾಗ ಹದಿನೈದು ಮಂದಿಯನ್ನಷ್ಟೇ ಕರೆತರಲು ಸಾಧ್ಯವಾಗುತ್ತದೆ. ವಯಾಬಲಿಟಿ ಕ್ಯಾಪ್ ಫಂಡಿಂಗ್ (ವಿಜಿಎಫ್) ಮೂಲಕ ಪ್ರತಿ ಸೀಟಿಗೆ 3 ಸಾವಿರವನ್ನು ಸರಕಾರವು ಕೊಡುತ್ತದೆ.[ಮೈಸೂರಿನಲ್ಲಿ ವಿಮಾನಯಾನ ಆರಂಭಿಸಲು ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ].
- ವಿಮಾನ ಯಾನದಿಂದ ಬರುವ ಆದಾಯ ಹಾಗೂ ತಗುಲುವ ವೆಚ್ಚದ ಮಧ್ಯೆ ಇರುವ ವ್ಯತ್ಯಾಸವನ್ನು ತುಂಬಿಕೊಡುವುದಕ್ಕೆ ವಯಾಬಲಿಟಿ ಕ್ಯಾಪ್ ಫಂಡಿಂಗ್ ಬಳಸಲಾಗುತ್ತದೆ. ಈ ಮೊತ್ತ ವರ್ಷಕ್ಕೆ 205 ಕೋಟಿ ಅಗಬಹುದು ಎಂದು ಅಂದಾಜಿಸಲಾಗಿದೆ. ಈ ವರೆಗೆ ಹತ್ತೊಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ಈ ಉದ್ದೇಶದ ಒಪ್ಪಂದಕ್ಕೆ ಸಹಿ ಹಾಕಿವೆ.
- ಅಗತ್ಯ ಭೂಮಿ ಒದಗಿಸುವುದು, ಅಗತ್ಯ ರಕ್ಷಣೆ, ವಿಮಾನ ನಿಲ್ದಾಣದಲ್ಲಿ ಒದಗಿಸುವ ಸೇವೆಯಲ್ಲಿ ವಿನಾಯಿತಿ ಒದಗಿಸುವುದಕ್ಕೆ ರಾಜ್ಯ ಸರಕಾರಗಳು ಒಪ್ಪಿವೆ. ಜತೆಗೆ ವಯಾಬಲಿಟಿ ಕ್ಯಾಪ್ ಫಂಡಿಂಗ್ ನಲ್ಲಿ ಶೇ 20ರಷ್ಟನ್ನು ರಾಜ್ಯಗಳು ಭರಿಸಬೇಕು. ಇನ್ನು ವಾಯವ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶೇ 10ರಷ್ಟು ಭರಿಸಬೇಕು.[ವಿಮಾನದೊಳಗೆ ವೈಫೈ ಇನ್ನೂ ದೂರದ ಕನಸು]
- ಅಲಯನ್ಸ್ ಏರ್, ಸ್ಪೈಸ್ ಜೆಟ್, ಟರ್ಬೀ ಮೇಘಾ, ಏರ್ ಒಡಿಶಾ ಮತ್ತು ಏರ್ ಡೆಕ್ಕನ್ ಏರ್ ಲೈನ್ಸ್ ಗಳು 128 ಹೊಸ ಮಾರ್ಗದಲ್ಲಿ ಸಂಚರಿಸುತ್ತವೆ.
- ಪ್ರತಿ ಸೀಟಿಗೆ/ ಒಂದು ಗಂಟೆ ಪ್ರಯಾಣಕ್ಕೆ ಗರಿಷ್ಠ 2,500 ನಿಗದಿ ಮಾಡಲಾಗಿದೆ. “ಅಂದಾಜು 500 ಕಿಲೋಮೀಟರ್ ದೂರದ ಒಂದು ಗಂಟೆ ಪ್ರಯಾಣಕ್ಕೆ ಅಥವಾ ಮೂವತ್ತು ನಿಮಿಷದ ಹೆಲಿಕಾಪ್ಟರ್ ಪ್ರಯಾಣಕ್ಕೆ ಗರಿಷ್ಠ 2,500 ನಿಗದಿ ಮಾಡಲಾಗಿದೆ” ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
- ಜೂನ್ 15, 2016ರಲ್ಲಿ ಬಿಡುಗಡೆ ಮಾಡಿದ ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ (NCAP) ಭಾಗವಾಗಿ ಉಡಾನ್ ಯೋಜನೆ ಪರಿಚಯಿಸಲಾಗಿದೆ.[ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಏರ್ ಕಾರ್ನಿವಲ್ ವಿಮಾನ]
- ಹೈದರಾಬಾದ್- ಕಡಪಾ, ಹೈದರಾಬಾದ್- ನಾಂದೇಡ್, ನಾಂದೇಡ್-ಮುಂಬೈ, ಚೆನ್ನೈ-ಮೈಸೂರು, ಚೆನ್ನೈ-ಸೇಲಂ, ಮುಂಬೈ- ಪೋರಬಂದರ್, ಕೋಲ್ಕತ್ತಾ- ಐಜ್ವಾಲ್, ಪುಣೆ- ನಾಸಿಕ್, ದೆಹಲಿ- ಡೆಹ್ರಾಡೂನ್, ರಾಂಚಿ-ರಾಯ್ಪುರ ಸೇರಿದಂತೆ ಇತರೆ ಮಾರ್ಗಗಳಲ್ಲಿ ವಿಮಾನ ಯಾನಕ್ಕೆ ಪ್ರಸ್ತಾವಿಸಲಾಗಿದೆ.
ಟಿಕೆಟ್ ದರ ಎಷ್ಟು?
ಒಂದು ಗಂಟೆಯ ವಿಮಾನ ಪ್ರಯಾಣಕ್ಕೆ, ಅಂದರೆ ಸುಮಾರು 500 ಕಿ.ಮೀ. ವಿಮಾನ ಪ್ರಯಾಣಕ್ಕೆ ₹2,500 ನಿಗದಿಪಡಿಸಲಾಗಿದೆ. ವಿಮಾನಯಾನದ ದೂರ ಮತ್ತು ಪ್ರಯಾಣದ ಅವಧಿಗೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸವಾಗಲಿದೆ. ಪ್ರತಿ ವಿಮಾನದಲ್ಲಿ ಒಂದು ಗಂಟೆಯ ಪ್ರಯಾಣಕ್ಕಾಗಿ ಗರಿಷ್ಠ ಶೇ.50ರಷ್ಟು ಸೀಟುಗಳು ಲಭ್ಯವಾಗಲಿವೆ.
ಉಡಾನ್ ವಿಮಾನ ಟಿಕೆಟ್ ಬುಕಿಂಗ್ ಹೇಗೆ?
ವಿಮಾನಯಾನ ಸಂಸ್ಥೆಗಳ ವೆಬ್ಸೈಟ್ ಮತ್ತು ಏರ್ಟಿಕೆಟ್ ಮಾರಾಟ ಮಾಡುವ ವೆಬ್ಸೈಟ್ಗಳಾದ ಯಾತ್ರಾ ಮತ್ತು ಮೇಕ್ಮೈ ಟ್ರಿಪ್ ಮೂಲಕವೂ ಉಡಾನ್ ಯೋಜನೆಯಡಿ ವಿಮಾನ ಟಿಕೆಟ್ ಖರೀದಿಸಬಹುದು.
ಈ ಯೋಜನೆಯ ಸಂಪೂರ್ಣ ಯಶಸನ್ನು ಕೆಳಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ನೋಡಬಹುದಾಗಿದೆ.
3 – ವಯ ವಂದನ ಯೋಜನೆ
ಈ ಯೋಜನೆಯು ಹಿರಿಯ ನಾಗರಿಕರಿಗೆ ಆದಾಯವನ್ನು ನೀಡುವ ಯೋಜನೆಯಾಗಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಈ ಯೋಜನೆ ಮೂಲಕ ವಿಮಾ ರಕ್ಷಣೆಯನ್ನು ನೀಡುತ್ತದೆ. ನಿವೃತ್ತಿ ಬಳಿಕ ಹಿರಿಯ ನಾಗರಿಕರಿಗೆ ಆರ್ಥಿಕ ಹಾಗೂ ವಿಮಾ ಸುರಕ್ಷತೆಗಾಗಿ ಈ ಯೋಜನೆಯನ್ನು ಮೋದಿ ಸರ್ಕಾರವು 2017ರ ಮೇ 4 ರಂದು ಪ್ರಾರಂಬಿಸಿತು.
ಸುಮಾರು 60 ವರ್ಷಕ್ಕಿಂತ ಅಧಿಕ ವಯಸ್ಸಿನವರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದ್ದು, ಈ ಯೋಜನೆಯು 2017 ಮೇ 4ರಿಂದ 2020ರ ಮಾರ್ಚ್ 31ರವರೆಗೆ ಇತ್ತು. ಆದರೆ ಬಳಿಕ ಮೂರು ವರ್ಷಗಳ ಕಾಲ ಅಂದರೆ 2023 ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಯಿತು. ಈ ಯೋಜನೆಯು ಸುಮಾರು ಹತ್ತು ವರ್ಷಗಳ ಕಾಲ ಪಿಂಚಣಿಯನ್ನು ನೀಡುತ್ತದೆ. ಸುಮಾರು ವಾರ್ಷಿಕ ಶೇಕಡ 7.4ರವರೆಗೆ ರಿಟರ್ನ್ ನೀಡುತ್ತದೆ. ಇದನ್ನು ಮಾಸಿಕವಾಗಿ ಹತ್ತು ವರ್ಷಗಳ ಕಾಲ ಪಾವತಿ ಮಾಡಲಾಗುತ್ತದೆ.
ನೀವು ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ 60 ವರ್ಷಕ್ಕಿಂತ ಅಧಿಕ ವಯಸ್ಸು ಆಗಿರಬೇಕು. ಗರಿಷ್ಠ ವಯೋಮಿತಿ ಇಲ್ಲ. ಹತ್ತು ವರ್ಷಗಳ ಅವಧಿಯ ಪಾಲಿಸಿ ಇದಾಗಿದೆ. ಕನಿಷ್ಠ ಪಿಂಚಣಿ ಮಾಸಿಕ ಒಂದು ಸಾವಿರವಾಗಿದೆ. ಗರಿಷ್ಠ ಪಿಂಚಣಿ ಮಾಸಿಕ ಹತ್ತು ಸಾವಿರ ರೂಪಾಯಿ ಆಗಿದೆ. ಕನಿಷ್ಠ ಪಿಂಚಣಿ ತ್ರೈಮಾಸಿಕ ಮೂರು ಸಾವಿರ ರೂಪಾಯಿ ಆಗಿದೆ. ಗರಿಷ್ಠ ಪಿಂಚಣಿ ತ್ರೈಮಾಸಿಕ ಮೂವತ್ತು ಸಾವಿರ ರೂಪಾಯಿ ಆಗಿದೆ. ಅರ್ಧ ವಾರ್ಷಿಕ ಪಿಂಚಣಿ ಕನಿಷ್ಠ ಆರು ಸಾವಿರ ರೂಪಾಯಿ ಆಗಿದೆ. ಅರ್ಧ ವಾರ್ಷಿಕ ಪಿಂಚಣಿ ಗರಿಷ್ಠ ಪಿಂಚಣಿ 60 ಸಾವಿರ ರೂಪಾಯಿ ಆಗಿದೆ. ವಾರ್ಷಿಕ ಪಿಂಚಣಿ ಕನಿಷ್ಠ ಹನ್ನೆರಡು ಸಾವಿರವಾದರೆ, ವಾರ್ಷಿಕ ಪಿಂಚಣಿ ಗರಿಷ್ಠ 1,20,000 ರೂಪಾಯಿ ಆಗಿದೆ.
ಗರಿಷ್ಠ ಮೊತ್ತ ವಾರ್ಷಿಕ: 14,49,086 ರೂಪಾಯಿ, ಪಿಂಚಣಿ 1,11,000 ರೂಪಾಯಿ ಅರ್ಧ ವಾರ್ಷಿಕ: 14,76,064 ರೂಪಾಯಿ, ಪಿಂಚಣಿ 55,500 ರೂಪಾಯಿ ತ್ರೈಮಾಸಿಕ: 14,89,933 ರೂಪಾಯಿ, ಪಿಂಚಣಿ 27,750 ರೂಪಾಯಿ ಮಾಸಿಕ: 15,00,000 ರೂಪಾಯಿ, ಪಿಂಚಣಿ 9250 ರೂಪಾಯಿ.
ಕನಿಷ್ಠ ಮೊತ್ತ ವಾರ್ಷಿಕ: 1,56,658 ರೂಪಾಯಿ, ಪಿಂಚಣಿ 12,000 ರೂಪಾಯಿ ಅರ್ಧ ವಾರ್ಷಿಕ: 1,59,574 ರೂಪಾಯಿ, ಪಿಂಚಣಿ 6,000 ರೂಪಾಯಿ ತ್ರೈಮಾಸಿಕ: 1,61,074 ರೂಪಾಯಿ, ಪಿಂಚಣಿ 3,000 ರೂಪಾಯಿ ಮಾಸಿಕ: 1,62,162 ರೂಪಾಯಿ, ಪಿಂಚಣಿ 1,000 ರೂಪಾಯಿ.
ಅರ್ಜಿ ಸಲ್ಲಿಸುವುದು ಹೇಗೆ:
ಆಫ್ಲೈನ್ ಮೂಲಕ ಈ ಯೋಜನೆಯನ್ನು ಖರೀದಿ ಮಾಡಬೇಕಾದರೆ ನೀವು ಎಲ್ಐಸಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ನೀಡುವ ಅರ್ಜಿಯನ್ನು ಭರ್ತಿ ಮಾಡಿ ಅದನ್ನು ಅಲ್ಲಿಯೇ ಸಲ್ಲಿಕೆ ಮಾಡಬೇಕು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡುವುದಾದರೆ ಕೆಲವು ಹಂತಗಳನ್ನು ಪಾಲನೆ ಮಾಡಬೇಕಾಗುತ್ತದೆ.
ಹಂತ 1: ಎಲ್ಐಸಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಹಂತ 2: buy policy online ನಲ್ಲಿ pradhan mantri vaya vandana yojana ಮೇಲೆ ಕ್ಲಿಕ್ ಮಾಡಿ
ಹಂತ 3: ಅದರಲ್ಲಿ ನಿಮಗೆ ನಾಲ್ಕು ಆಯ್ಕೆ ಲಭ್ಯವಾಗಲಿದೆ. buy online ಆಯ್ಕೆಗಾಗಿ 842 ಮೇಲೆ ಕ್ಲಿಕ್ ಮಾಡಿ
ಹಂತ 4: Click to Buy Online ಮೇಲೆ ಕ್ಲಿಕ್ ಮಾಡಿ,ಇಮೇಲ್, ಮೊದಲಾದ ಮಾಹಿತಿಯನ್ನು ನೀಡಿ ಆಕ್ಸಸ್ ಐಡಿಯನ್ನು ಕ್ರಿಯೆಟ್ ಮಾಡಿ
ಹಂತ 5: ನಿಮಗೆ ಎಸ್ಎಂಎಸ್ ಮೂಲಕ ಒಂಬತ್ತು ಡಿಜಿಟ್ ಐಡಿ ಲಭ್ಯವಾಗಲಿದೆ.
ಹಂತ 6: ಆಕ್ಸಸ್ ಐಡಿ ಹಾಕಿ Proceed ಮೇಲೆ ಕ್ಲಿಕ್ ಮಾಡಿ, pradhan mantri vaya vandana yojanaಯ ಅರ್ಜಿ ಭರ್ತಿ ಮಾಡಿ
ಹಂತ 7: ಅರ್ಜಿ ಸಲ್ಲಿಕೆ ಮಾಡಿದರೆ ನಿಮಗೆ ಪಾಲಿಸಿ ನಂಬರ್ ಹಾಗೂ ಅಕ್ನಾಲಜ್ಮೆಂಟ್ ಲಭ್ಯವಾಗಲಿದೆ.
ಬೇಕಾಗಿರುವ ದಾಖಲೆಗಳು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಯಾವ ಬ್ಯಾಂಕ್ನಲ್ಲಿ ಪಿಂಚಣಿ ಪಡೆಯಲು ಬಯಸುತ್ತೀರೋ ಆ ಬ್ಯಾಂಕ್ ಖಾತೆ ಸಂಖ್ಯೆ
- ನಿಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ
4 – ಸಹಜ್ ಬಿಜಲಿ ಹರ್ ಘರ್ ಯೋಜನೆಯಡಿ
ಭಾರತದ ಬಹುತೇಕ ಎಲ್ಲ ಹಳ್ಳಿಗಳು ಮತ್ತು ನಗರಗಳಿಗೆ ವಿದ್ಯುತ್ ತಲುಪುತ್ತಿದೆ. ಆದರೂ ವಿದ್ಯುತ್ ಸಂಪರ್ಕದ ವೆಚ್ಚ ಹೆಚ್ಚಿರುವ ಕಾರಣ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಈ ವೆಚ್ಚವನ್ನು ಭರಿಸಲು ಶಕ್ತರಾಗಿಲ್ಲ. ಇದಲ್ಲದೆ, ಇಂದಿಗೂ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಅನೇಕ ಹಳ್ಳಿಗಳಲ್ಲಿ, ರೈತರಿಗೆ ಸಾಕಷ್ಟು ವಿದ್ಯುತ್ ಸಿಗುವುದಿಲ್ಲ. ವಿದ್ಯುತ್ ಪೂರೈಕೆಯು ಅವರ ಯಶಸ್ಸು ಮತ್ತು ಆರ್ಥಿಕ ಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ‘ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ’ಯನ್ನು 2017ರ ಸಪ್ಟಂಬರ್ 25ರಂದು ಪ್ರಾರಂಭಿಸಲಾಯಿತು.
ಪ್ರಧಾನ ಮಂತ್ರಿ ಸಹಜ್ ಬಿಜಲಿ ಹರ್ ಘರ್ ಯೋಜನೆಯಡಿ ಆರ್ಥಿಕವಾಗಿ ದುರ್ಬಲವಾಗಿರುವ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಹಾಗೂ ಇತರೆ ಕುಟುಂಬಗಳಿಗೆ 10 ಮಾಸಿಕ ಕಂತುಗಳಲ್ಲಿ ತಲಾ ₹50ರಂತೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಈ ಯೋಜನೆಯಡಿ 1.23 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ. 2017-18ರಡಿ ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ ಯೋಜನೆ) ಅಡಿಯಲ್ಲಿ 51.04 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಯೋಜನೆಯನ್ನು ಜನರಿಗೆ ಸುಲಭವಾಗಿಸಲು, ‘ಇ-ಸಂಯೋಜನ್ ಮೊಬೈಲ್ ಅಪ್ಲಿಕೇಶನ್’ ಅನ್ನು ಸಹ ಆರಂಭಿಸಲಾಗಿದೆ. ಈ ಯೋಜನೆಯ ಮೂಲಕ ರೈತರಿಗೆ ವಿದ್ಯುತ್ ಅಗತ್ಯವಿರುವಲ್ಲಿ ವಿದ್ಯುತ್ ಒದಗಿಸಲಾಗುತ್ತದೆ ಮತ್ತು ಅವರ ಕೊಳವೆಬಾವಿ ಸಂಬಂಧಿತ ಸಮಸ್ಯೆಗಳನ್ನು ಕೂಡ ಪರಿಹರಿಸಲಾಗುತ್ತದೆ. ಇದರಿಂದ ಕೃಷಿ ಉತ್ಪಾದನೆ ಕೂಡ ಹೆಚ್ಚುತ್ತದೆ. ಅವರ ಆರ್ಥಿಕ ಸ್ಥಿತಿಯನ್ನು ಸಹ ಬಲಪಡಿಸಬಹುದು.
ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆಗೆ ಅರ್ಹತೆ
- ವ್ಯಕ್ತಿಯು ದೇಶದ ಖಾಯಂ ನಿವಾಸಿಯಾಗಿರಬೇಕು.
- ವ್ಯಕ್ತಿಯು ಎಪಿಎಲ್, ಬಿಪಿಎಲ್ ಕುಟುಂಬ ಅಥವಾ ರೈತನಾಗಿರಬೇಕು.
- ಉಚಿತ ವಿದ್ಯುತ್ ಪಡೆಯಬೇಕೆಂದರೆ, ಮನೆಯಲ್ಲಿರುವ ಯಾವುದೇ ವ್ಯಕ್ತಿ ಸರ್ಕಾರಿ ಕೆಲಸದಲ್ಲಿ ಇರಬಾರದು
- ಬಡತನ ರೇಖೆಗಿಂತ ಕೆಳಗಿರುವ ಜನರು ಯೋಜನೆಗೆ ಅರ್ಹರು.
- ಆದಾಯ ತೆರಿಗೆ ಪಾವತಿಸುವ ಜನರು ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ.
ಬೇಕಾಗಿರುವ ದಾಖಲೆಗಳು
ಯೋಜನೆಯ ಲಾಭ ಪಡೆಯಲು, ಅರ್ಜಿದಾರರು ಮತದಾರರ ಗುರುತಿನ ಚೀಟಿ, ಹಿಂದಿನ ವಿದ್ಯುತ್ ಸಂಪರ್ಕ ದಾಖಲೆಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆದಾಯ ಪ್ರಮಾಣಪತ್ರ, ಬಿಪಿಎಲ್, ಎಪಿಎಲ್ ರೇಷನ್ ಕಾರ್ಡ್ ಮುಂತಾದ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯ ಲಾಭ ಪಡೆಯಲು ನೀವು ಅಧಿಕೃತ ವೆಬ್ಸೈಟ್ಗೆ ಹೋಗಿ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನೀವು ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆಯಡಿ ಆರಂಭಿಸಲಾದ ‘ಇ-ಸಂಯೋಜನ್’ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು. ಇದಲ್ಲದೆ, ನಿಮ್ಮ ರಾಜ್ಯ ಸರ್ಕಾರದ ವಿದ್ಯುತ್ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಮನೆಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸಹ ಈ ಯೋಜನೆಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ, ನೀವು ರಾಜ್ಯಗಳ ಪ್ರಕಾರ ಪ್ರಧಾನ ಮಂತ್ರಿ ಹರ್ ಘರ್ ಬಿಜ್ಲಿ ಯೋಜನೆಯ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಬಹುದು.
ಇದುವರೆಗೂ ಈ ಯೋಜನೆಯ ಲಾಭವನ್ನು ದೇಶದೆಲ್ಲೆಡೆ 2.86 ಕೋಟಿ ಜನರು ಪಡೆದುಕೊಂಡಿದ್ದಾರೆ. ಇದರ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ.