ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಮೇಲೆ ಬಿ.ಶ್ರೀರಾಮುಲು ಅವರು ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ದಿನಕ್ಕೊಂದು ತಾಲ್ಲೂಕಿನಂತೆ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಮಾರ್ಚ್ 31, 2024ರಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮತಭಾಂದವರನ್ನು ಭೇಟಿ ಮಾಡಿ ಮತಯಾಚನೆ ನಡೆಸಿದ್ದುಅವರ ಸಂಪೂರ್ಣ ಪ್ರಚಾರ ಪ್ರವಾಸವು ಹೇಗಿತ್ತು ಎನ್ನುವುದರ ಮಾಹಿತಿ ಇಲ್ಲಿದೆ. ಮುಂದೆ ಓದಿ..!!  

ಬೆಳಗ್ಗೆ 9 ಗಂಟೆಗೆ ಸರಿಯಾಗಿ ಗೊಲ್ಲಲಿಂಗಮ್ಮನಹಳ್ಳಿ ದೇವಗಿರಿ ಗ್ರಾಮದಿಂದ ಪ್ರಾರಂಭವಾದ ಪ್ರಚಾರ ಪ್ರವಾಸವು ನಂತರ 11 ಗಂಟೆಗೆ  ಬೊಮ್ಮಘಟ್ಟ ಯರ್ರಯ್ಯನಹಳ್ಳಿ ಹಾಗೂ 12.30ಕ್ಕೆ ಚೋರ್ನೂರು -ಕಾಳಿಂಗೇರಿ ಗ್ರಾಮದಲ್ಲಿ ಕಾರ್ಯಕರ್ತರ ಜೊತೆ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ತದನಂತರ ಮಧ್ಯಾನ್ಹ 1.30ಕ್ಕೆ ಸೋವೆನಹಳ್ಳಿ ಅಗ್ರಹಾರ ಹೆಚ್.ಕೆ.ಹಳ್ಳಿಯಲ್ಲಿ ಪ್ರಚಾರ ನಡೆಸಿದ ಶ್ರೀರಾಮುಲು ಅವರು 3 ಗಂಟೆಗೆ ಬಂದ್ರಿ-ನಿಡಾಗೂರ್ತಿ ಗ್ರಾಮದಲ್ಲಿ ಪ್ರಚಾರ ನಡೆಸಿ ಸಂಜ್ 4.30ರ ಸುಮಾರು ಯಶ್ವಂತನಗರ, ಕೃಷ್ಣನಗರ ಹಾಗೂ ಕೊನೆಯದಾಗಿ 6.30ಕ್ಕೆ ಸಂಡೂರು ಕೆಂದರಗಲ್ಲು ಗ್ರಾಮದಲ್ಲಿ ಪ್ರಚಾರ ಮಾಡುವ ಮೂಲಕ ಸಂಡೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಯಶಸ್ವಿಯಾಗಿ ಮತಯಾಚನೆ ನಡೆಸಿದರು.

ಮಾರ್ಚ್ 30, 2024 ರಂದು ಸಂಡೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಂದ ನಡೆದ ಪ್ರಚಾರ ನಡೆಸುವಾಗ ಮತದಾರರ ತೊಂದರೆಗಳನ್ನು ಆಲಿಸಿದ ಕ್ಷಣಗಳು.

Share Now