ಮಾರ್ಚ್ 28,2024ರಂದು ವಿಜಯನಗರ ಜಿಲ್ಲೆ ಹೂವಿನಹಡಗಲಿ ನಗರದ ಕಾಂಗ್ರೆಸ್ ಮುಖಂಡ, ಮಾಜಿ ಪುರಸಭೆ ಅಧ್ಯಕ್ಷರು ಹಾಗೂ ಹಾಲಿ ಪುರಸಭೆ ಸದಸ್ಯರಾದ ವರಾದ್ ಗೌಸ್ ಅವರು ಕಾಂಗ್ರೆಸ್ ಪಕ್ಷವನ್ನುತೊರೆದು ಅವರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ದುಷ್ಟ ಆಡಳಿತಕ್ಕೆ ಬೇಸತ್ತು ಹಾಗೂ ನರೇಂದ್ರ ಮೋದಿ ಅವರ ಆಡಳಿತಕ್ಕೆ ಮನವೊಲಿದು ತಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಗೌಸ್ ಅವರು ತಿಳಿಸಿದ್ದಾರೆ. ಅವರ ಆಗಮನದಿಂದ ಹೂವಿನಹಡಗಲಿ ಭಾಗದ ಬಿಜೆಪಿ ಪಕ್ಷದಲ್ಲಿ ಮತ್ತಷ್ಟು  ಬಲಬಂದಂತಾಗಿದೆ.

ಈ ಸಂದರ್ಭದಲ್ಲಿ ಬಳ್ಳಾರಿ ವಿಜಯನಗರ ಲೋಕಸಭಾ ಅಭ್ಯರ್ಥಿಯಾದ ಶ್ರೀರಾಮುಲು, ವಿಜಯನಗರ ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ ಪಾಟೀಲ್, ಹೂವಿನಹಡಗಲಿ ಶಾಸಕರಾದ ಕೃಷ್ಣ ನಾಯ್ಕ್, ಪಕ್ಷದ ಹಿರಿಯ ಮುಖಂಡರಾದ ಓದೋ ಗಂಗಪ್ಪ, ತಾಲ್ಲೂಕು ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

On March 28, 2024, Varad Gouse, the Congress leader, former municipal president and sitting municipal councilor of Vijayanagra District, Huvinahadagali, has officially joined the BJP party along with his supporters. Gouse said that they have taken this decision because they are fed up with the evil administration of the Congress government and persuaded by Narendra Modi’s administration. His arrival has further strengthened the BJP party.

Bellary Vijayanagar Lok Sabha candidate Sriramulu, Vijayanagar district president Channabasavanagowda Patil, Huvinahadagali MLA Krishna Naik, senior party leaders Odo Gangappa, taluk president, party office bearers and workers were present on this occasion.

Share Now