ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಮೇಲೆ ಬಿ.ಶ್ರೀರಾಮುಲು ಅವರು ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ದಿನಕ್ಕೊಂದು ತಾಲ್ಲೂಕಿನಂತೆ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಮಾರ್ಚ್ 30, 2024ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮತಭಾಂದವರನ್ನು ಭೇಟಿ ಮಾಡಿ ಮತಯಾಚನೆ ನಡೆಸಿದ್ದುಅವರ ಸಂಪೂರ್ಣ ಪ್ರಚಾರ ಪ್ರವಾಸವು ಹೇಗಿತ್ತು ಎನ್ನುವುದರ ಮಾಹಿತಿ ಇಲ್ಲಿದೆ. ಮುಂದೆ ಓದಿ..!!  

ಬೆಳಗ್ಗೆ 9 ಗಂಟೆಗೆ ಸರಿಯಾಗಿ ಹೊಸೂರು ಗ್ರಾಮದಿಂದ ಪ್ರಾರಂಭವಾದ ಪ್ರಚಾರ ಪ್ರವಾಸವು ನಂತರ 10.30ಕ್ಕೆ ನಾಗೇನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರ ಜೊತೆ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಆನಂದ್ ಸಿಂಗ್, ಹೊಸಪೇಟೆಯ ಯುವ ಮುಖಂಡರಾದ ಸಿದ್ದಾರ್ಥ್ ಸಿಂಗ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪದ್ಮ, ತಾಲ್ಲೂಕು ಅಧ್ಯಕ್ಷರಾದ ಶಂಕರ್ ಮೇಟಿ, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಂತರ 11.30ಕ್ಕೆ ಮಲಪನಗುಡಿ, 12.45ಕ್ಕೆ ಹಂಪಿ ಹಾಗೂ 2.30ಕ್ಕೆ ಬುಕ್ಕಸಾಗರಕ್ಕೆ ತೆರಳಿದ ಶ್ರೀರಾಮುಲು ಅವರು ಮತಯಾಚನೆ ನಡೆಸಿದರು.

ಸಂಜೆ 4 ಗಂಟೆಗೆ ಸೀತಾರಾಮ ತಾಂಡದಲ್ಲಿ ಬಿರುಸಿನ ಪ್ರಚಾರ ನಡೆಸಿದ ರಾಮುಲು ಅವರು ಸಂಜೆ 5 ಗಂಟೆಗೆ ಕಮಲಾಪುರದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮತಯಾಚನೆ ನಡೆಸಿದರು.

ಹೊಸಪೇಟೆವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆಂದು ತೆರಳಿದಾಗ ಜನರು ತೋರಿಸಿದ ಪ್ರೀತಿಯನ್ನು ಕಂಡ ಶ್ರೀರಾಮುಲು ಅವರು ಭಾವುಕರಾದಂತಹ ಘಟನೆ ಕೂಡ ನಡೆಯಿತು. 

ಮಾರ್ಚ್ 30, 2024 ರಂದು ಹೊಸಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಂದ ನಡೆದ ಪ್ರಚಾರದ ಹಿನ್ನೋಟ.

Share Now