2024ರ ಏಪ್ರಿಲ್ 15,16 ಮತ್ತು 17 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ಮಂಡಲದ ವತಿಯಿಂದ “ಮನೆ ಮನೆಗೆ ಸಂಪರ್ಕ ಅಭಿಯಾನ” ನಡೆಸಲಾಗುತ್ತಿದ್ದು ಬಳ್ಳಾರಿ ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀರಾಮುಲು ಅವರ ಪರವಾಗಿ ಈ ಅಭಿಯಾನದ ಮೂಲಕ ಮತಯಾಚನೆ ನಡೆಸಲಾಗುತ್ತಿದೆ.

ವಿಜಯನಗರ ಜಿಲ್ಲೆಯ ಮಾನ್ಯ ಜಿಲ್ಲಾಧ್ಯಕ್ಷರಾದ ಶ್ರೀ ಚನ್ನ ಬಸವನಗೌಡ ಪಾಟೀಲ್ ಮತ್ತು ಮಾಜಿ ಸಚಿವರಾದ ಶ್ರೀ ಆನಂದ್ ಸಿಂಗ್, ರಾಜ್ಯ ಯುವಮೋರ್ಚಾ ಕೋಶಾಧ್ಯಕ್ಷರಾದ ಶ್ರೀ ಸಿದ್ದಾರ್ಥ್ ಸಿಂಗ್ ಅವರ ಸೂಚನೆಯ ಮೇರೆಗೆ ಈ ಅಭಿಯಾನ ಪ್ರಾರಂಭಿಸಲಾಗಿದೆ.

ಬೆಳಿಗ್ಗೆ 8.00 ಗಂಟೆಗೆ ಹೊಸಪೇಟೆ ಮಂಡಲ ಅಧ್ಯಕ್ಷರಾದ ಶ್ರೀ ಶಂಕರ್ ಮೇಟಿ ಅವರ ಸಮ್ಮುಖದಲ್ಲಿ ಪ್ರಾರಂಭವಾದ ಅಭಿಯಾನದಲ್ಲಿ ಬೂತ್ ಮಟ್ಟದ ಹಿರಿಯ ಮುಖಂಡರು, ಎಲ್ಲಾ ಚುನಾಯಿತ ಜನಪ್ರತಿನಿಧಿಗಳು,ಮಹಿಳಾ ಕಾರ್ಯಕರ್ತರು, ಎಲ್ಲಾ ಮೋರ್ಚಾ,ಮಹಾಶಕ್ತಿಕೇಂದ್ರ, ನಗರಮಹಾಶಕ್ತಿ ಕೇಂದ್ರ,ಎಲ್ಲಾ ಪದಾಧಿಕಾರಿಗಳು, ಯುವಕರು, ಅಭಿಮಾನಿಗಳು ಭಾಗವಹಿಸಿ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀರಾಮುಲು ಅವರ ಪರವಾಗಿ ಮತಯಾಚನೆ ನಡೆಸುತ್ತಿದ್ದಾರೆ.

Share Now