ದೇಶದ ಜನತೆಯ ಒಳಿತಿಗಾಗಿ ಮೋದಿ ಸರ್ಕಾರವು 2015 ರಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಬಳಸಿಕೊಂಡು ಕೋಟ್ಯಾನು ಕೋಟಿ ಭಾರತೀಯರು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಅದೆಷ್ಟೋ ಜನಗಳಿಗೆ ಮೋದಿ ಸರ್ಕಾರದ ಅನೇಕ ಯೋಜನೆಗಳ ಕುರಿತು ಸರಿಯಾಗಿ ಮಾಹಿತಿ ಸಿಗದೆ ಮೋದೀಜೀ ಅವರು ದೇಶದ ಪ್ರಗತಿಗೆ ಏನೂ ಕೆಲಸ ಮಾಡಿಲ್ಲವೆಂದು ಹೇಳುತ್ತಾರೆ. ಆದ್ದರಿಂದ ಈ ಲೇಖನದಲ್ಲಿ ಮೋದಿ ಸರ್ಕಾರದ ಯೋಜನೆಗಳು ಮತ್ತು ಆ ಯೋಜನೆಗಳ ಸದುಪಯೋಗ ಪಡೆದುಕೊಂಡ ಪಲಾನುಭವಿಗಳ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ.

2015 ರಲ್ಲಿ ಜಾರಿಗೆ ತಂದ ಯೋಜನೆಗಳು 

1 – ಬೇಟಿ ಬಚಾವೋ ಬೇಟಿ ಪಡಾವೋ

ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಬೇಟಿ ಬಚಾವೋ ಬೇಟಿ ಪಢಾವೋ’ (BBBP) ಯೋಜನೆಯನ್ನು 2015ರ ಜನವರಿ 22ರಂದು ಹರಿಯಾಣದ ಪಾಣಿಪತ್‌ನಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳ ಸಹಯೋಗದಲ್ಲಿಅನುಷ್ಠಾನ ಮಾಡಲಾಯಿತು. ಹೆಣ್ಣು ಮಕ್ಕಳ ಮೇಲಿನ ತಾರತಮ್ಯವನ್ನು ತೊಡೆದುಹಾಕುವುದು ಮತ್ತು ಅವರ ಬಗ್ಗೆ ಜನರಲ್ಲಿ ನಕಾರಾತ್ಮಕ ಮನೋಭಾವವನ್ನು ಬದಲಾಯಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು.

ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಭಾಗವಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯಡಿ, ಹೆಣ್ಣು ಮಕ್ಕಳ ಹೆಸರಲ್ಲಿ ಪ್ರತಿ ತಿಂಗಳು 1000 ರೂಪಾಯಿಗಳನ್ನು ಖಾತೆಗೆ ಜಮಾ ಮಾಡಿದರೆ, ಈ ಮೊತ್ತವು ಒಂದು ವರ್ಷದಲ್ಲಿ 12 ಸಾವಿರ ಆಗುತ್ತದೆ. 14 ವರ್ಷಗಳಲ್ಲಿ ಒಟ್ಟು ಮೊತ್ತ 1,68,000 ಆಗಲಿದೆ. ನಂತರ 21 ವರ್ಷಗಳ ನಂತರ ನಿಮ್ಮ ಮಗಳು 6 ಲಕ್ಷಕ್ಕೂ ಹೆಚ್ಚು ಹಣ ಪಡೆಯುತ್ತಾರೆ.

ಯೋಜನೆಯ ಉದ್ದೇಶ..

ಲಿಂಗಾನುಪಾತದ ಅಂತರವನ್ನು ಕಡಿಮೆ ಮಾಡುವುದು, ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು ಮತ್ತು ಲಿಂಗ ಅಸಮಾನತೆಯನ್ನು ತೆಗೆದುಹಾಕುವುದು ಯೋಜನೆಯ ಉದ್ದೇಶವಾಗಿದೆ. ಯೋಜನೆಯಡಿ, ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಲು ಮತ್ತು ಸಮಾಜದಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಹೆಣ್ಣು ಮಕ್ಕಳ ಹೆಸರಲ್ಲಿ ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಅವರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಈ ಹಣದಿಂದ ನಿಮ್ಮ ಮಗಳು ತನ್ನ ಭವಿಷ್ಯ ರೂಪಿಸಿಕೊಳ್ಳಬಹುದು.

ಯೋಜನೆಗೆ ಅರ್ಹತೆ ಏನಿರಬೇಕು?

  • ಯೋಜನೆಯ ಲಾಭ ಪಡೆಯಲು ಈ ಕೆಳಗಿನ ಅರ್ಹತೆ ಹೊಂದಿರಬೇಕು.
  • ಭಾರತೀಯ ಪೌರತ್ವವನ್ನು ಹೊಂದಿರಬೇಕು.
  • ಮಗಳು ಯಾವುದೇ ಬ್ಯಾಂಕಿನಲ್ಲಿ ತನ್ನದೇ ಆದ ಸುಕನ್ಯಾ ಸಮೃದ್ಧಿ ಖಾತೆ (SSA) ಹೊಂದಿರಬೇಕು.
  • ವಯಸ್ಸು 10 ವರ್ಷಕ್ಕಿಂತ ಕಡಿಮೆಯಿರಬೇಕು

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಯಾವುದೇ ವಾಣಿಜ್ಯ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ.
  • ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (PPB) ಅಥವಾ ಸುಕನ್ಯಾ ಸಮೃದ್ಧಿ ಖಾತೆ (SSA) ತೆರೆಯಲು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅದರಲ್ಲಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ದಾಖಲೆಗಳನ್ನು ಸಲ್ಲಿಸಿ ನಿಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆಯಿರಿ.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ನೀವು ಅರ್ಜಿ ಸಲ್ಲಿಸಬಹುದು.

ಇದುವರೆಗೂ ಈ ಯೋಜನೆಯಿಂದ ದೇಶದಲ್ಲಿ ಹೆಣ್ಣು ಮಗುವಿನ ಜನಸಂಖ್ಯೆ ಹೆಚ್ಚಾಗಿದ್ದು ಇದರಿಂದ ಹೆಣ್ಣು ಮತ್ತು ಗಂಡು ಲಿಂಗದ ಸಮತೋಲನವಾಗಿದೆ. ಇದರ ಕುಟಿತು ಹೆಚ್ಚು ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.

https://wcd.nic.in/bbbp-schemes

2 – ಹೃದಯ್ ಯೋಜನೆ

ಹೃದಯ್‌ ಯೋಜನೆ ಎಂದ ಕೂಡಲೇ ಇದು ಆರೋಗ್ಯ ಸಂಬಂಧಿಸಿದ ಯೋಜನೆ ಎನಿಸುವುದು ಸಹಜ. ಆದರೆ, ಈ ಯೋಜನೆ ಪಾರಂಪರಿಕ ನಗರಗಳ ಅಭಿವೃದ್ಧಿ ಕುರಿತ ಯೋಜನೆಯಾಗಿದೆ. ಈ ಯೋಜನೆ ಪೂರ್ಣ ಹೆಸರು ‘ಪಾರಂಪರಿಕ ನಗರಗಳ ಅಭಿವೃದ್ಧಿ ಮತ್ತು ನವೀಕರಣ ಯೋಜನೆ’ (Heritage City Development and Augmentation Yojana- HRIDAY). ಇದನ್ನು ಸಂಕ್ಷಿಪ್ತವಾಗಿ ಹೃದಯ್‌ ಯೋಜನೆ ಎಂದು ಕರೆಯಲಾಗುತ್ತದೆ.

ದೇಶದ ಸಾಂಸ್ಕೃತಿಕ ಪರಂಪರೆಯ ತಾಣಗಳ ಮರುಸ್ಥಾಪನೆ ಮತ್ತು ಅಭಿವೃದ್ಧಿಗಾಗಿ 2015ರ ಜನವರಿ 21ರಂದು ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಈ ಯೋಜನೆಯಡಿ ದೇಶದ ಐತಿಹಾಸಿಕ ಪರಂಪರೆಯುಳ್ಳ 12 ನಗರಗಳನ್ನು ಆಯ್ಕೆ ಮಾಡಲಾಯಿತು. ಅವುಗಳೆಂದರೆ “ವಾರಾಣಸಿ, ಅಮೃತಸರ, ವಾರಂಗಲ್, ಅಜ್ಮೀರ, ಗಯಾ, ಮಥುರಾ, ಕಾಂಚೀಪುರಂ, ವೆಲ್ಲಂಕಿಣಿ, ಅಮರಾವತಿ, ಬಾದಾಮಿ, ದ್ವಾರಕಾ ಮತ್ತು ಪುರಿ”.

ಹೃದಯ್‌ ಯೋಜನೆಯ ಪ್ರಮುಖ ಅಂಶಗಳು :

  • HRIDAY ಯೋಜನೆಯು ದೇಶದ ಪಾರಂಪರಿಕ ತಾಣಗಳನ್ನು ಸಂರಕ್ಷಿಸುವ ಜೊತೆಗೆ ಅವುಗಳ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಸರಿಪಡಿಸುವ ಯೋಜನೆ ಹೊಂದಿದೆ. ಇದರಲ್ಲಿ ಪಾರಂಪರಿಕ ತಾಣಗಳಾಗಿರುವ 12 ನಗರಗಳನ್ನು ಆಯ್ಕೆ ಮಾಡಲಾಯಿತು, ಅವುಗಳೆಂದರೆ “ವಾರಾಣಸಿ, ಅಮೃತಸರ, ವಾರಂಗಲ್, ಅಜ್ಮೀರ, ಗಯಾ, ಮಥುರಾ, ಕಾಂಚೀಪುರಂ, ವೆಲ್ಲಂಕಿಣಿ, ಅಮರಾವತಿ, ಬಾದಾಮಿ, ದ್ವಾರಕಾ ಮತ್ತು ಪುರಿ”.
  • ಈ ಯೋಜನೆಯ ಒಟ್ಟು ಬಜೆಟ್ 500 ಕೋಟಿ ರೂಪಾಯಿ.
  • ಈ ಯೋಜನೆಯಲ್ಲಿ ಆಯ್ಕೆಯಾಗಿರುವ ನಗರಗಳನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುಷ್ಠಾನ ಮಾಡಿದವು.
  • ಐತಿಹಾಸಿಕ ಕಟ್ಟಡಗಳಲ್ಲಿನ ನೀರಿನ ನಿರ್ವಹಣೆ, ಸ್ವಚ್ಛತೆ, ವಿದ್ಯುತ್ ಸರಬರಾಜು, ಪ್ರವಾಸೋದ್ಯಮ ಕೇಂದ್ರದಂತಹ ಸೌಲಭ್ಯಗಳನ್ನು ಸುಧಾರಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
  • ಈ ಯೋಜನೆಯು ವಿದೇಶಿ ಪ್ರವಾಸಿಗರಲ್ಲಿ ಭಾರತದತ್ತ ಆಕರ್ಷಣೆ ಉಂಟುಮಾಡುವ ಪ್ರಮುಖ ಉದ್ದೇಶ ಹೊಂದಿದೆ.

ಇದುವರೆಗೂ ಈ ಯೋಜನೆಗಾಗಿ ಮೋದಿ ಸರ್ಕಾರವು ಎಷ್ಟು ಹಣವನ್ನು ಬಿಡುಗಡೆ ಮಾಡಿದೆ ಮತ್ತು ಎಷ್ಟು ಹಣ ಬಳಕೆಯಾಗಿದೆ ಹಾಗೂಇದರ ಕುರಿತ ಹೆಚ್ಚು ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.

https://pib.gov.in/PressReleaseIframePage.aspx?PRID=1795154#:~:text=The%20mission%20has%20ended%20on,directly%20released%20to%20the%20cities.

3 – ಮುದ್ರಾ ಯೋಜನೆ

ಸ್ವಂತ ಉದ್ಯಮ ಆರಂಭಿಸಬೇಕು ಎಂದುಕೊಂಡವರಿಗೆ ಮೊದಲು ಎದುರಾಗುವ ಸವಾಲು ಬಂಡವಾಳದ್ದು. ಅದರಲ್ಲೂ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಹಲವಾರು ದಾಖಲೆಗಳನ್ನು ನೀಡಬೇಕಾಗುತ್ತದೆ. ಜೊತೆಗೆ ಹೆಚ್ಚಿನ ಬಡ್ಡಿ ಕೂಡ ಪಾವತಿಸಬೇಕಾಗುತ್ತದೆ. ಅಲ್ಲದೆ ಸಾಲ ಪಡೆಯಲು ಕೆಲವು ಅಡಮಾನಗಳನ್ನು ಸಹ ಇಡಬೇಕಾಗುತ್ತದೆ. ಇಷ್ಟೆಲ್ಲ ಮಾಡಿಯೂ ಕಡಿಮೆ ಬಡ್ಡಿಗೆ ಸಾಲ ಸಿಗೋದು ಬಹುತೇಕ ಅನುಮಾನ. ಇಂಥ ಪರಿಸ್ಥಿತಿಯಲ್ಲಿ ಸ್ವಂತ ಉದ್ಯಮದ ಕನಸು ಕಾಣುತ್ತಿರುವವರಿಗಾಗಿಯೇ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)ಯನ್ನು ಜಾರಿಗೆ ತಂದಿತು. ಕಡಿಮೆ ಬಡ್ಡಿಯೊಂದಿಗೆ ಮತ್ತು ಅಪಾಯ ಮುಕ್ತ ಸಾಲವನ್ನು ನೀವು ಈ ಯೋಜನೆಯ ಮೂಲಕ ಪಡೆಯಬಹುದು. ಈ ಮೂಲಕ ನೀವು ಕೂಡ ಉದ್ಯಮಿಯಾಗಬಹುದು.

ಕೇಂದ್ರ ಸರ್ಕಾರವು ಈ ಮುದ್ರಾ ಸಾಲ ಯೋಜನೆಯನ್ನು ಏಪ್ರಿಲ್ 2015ರಲ್ಲಿ ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ 3 ವರ್ಗಗಳ ಸಾಲಗಳಿವೆ. ಮೊದಲ ವರ್ಗ ಶಿಶು ಸಾಲ ಯೋಜನೆ, ಎರಡನೆಯದು ಕಿಶೋರ್ ಸಾಲ ಮತ್ತು ಮೂರನೆಯದು ತರುಣ್ ಸಾಲ.

ಶಿಶು ಸಾಲ: ಶಿಶು ಸಾಲದ ಅಡಿಯಲ್ಲಿ 50,000 ರೂಪಾಯಿವರೆಗೆ ಸಾಲ ನೀಡಲಾಗುತ್ತದೆ.

ಕಿಶೋರ್ ಸಾಲ: ಕಿಶೋರ್ ಸಾಲದ ಅಡಿಯಲ್ಲಿ 50,000 ರೂ.ನಿಂದ 5 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ.

ತರುಣ್ ಸಾಲ : ತರುಣ್ ಸಾಲದ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ.

ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಉದ್ಯಮವನ್ನು ಪ್ರಾರಂಭಿಸಲು 50 ಸಾವಿರದಿಂದ 10 ಲಕ್ಷ ರೂ.ವರೆಗೆ ಸಾಲವನ್ನು ನೀಡುತ್ತದೆ. ತನ್ನದೇ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ಯಾವುದೇ ಭಾರತೀಯ ನಾಗರಿಕನು ಪಿಎಂಎಂವೈ ಅಡಿಯಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು. ಅಲ್ಲದೆ ಈ ಸಾಲವನ್ನು ತೆಗೆದುಕೊಳ್ಳುವಾಗ ಯಾವುದೇ ಪ್ರಕ್ರಿಯೆ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಜತೆಗೆ ಯಾವುದೇ ರೀತಿಯ ಆಸ್ತಿಯನ್ನು ಅಡಮಾನ ಇಡಬೇಕಾಗಿಯೂ ಇಲ್ಲ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಪಡೆದ ಸಾಲವನ್ನು 3 ವರ್ಷದಿಂದ 5 ವರ್ಷಗಳ ಒಳಗೆ ಅಂದರೆ 36 ತಿಂಗಳಿಂದ 60 ತಿಂಗಳ ಒಳಗೆ ಮರುಪಾವತಿ ಮಾಡಬೇಕು. ವೈಯಕ್ತಿಕ ಸಾಲಗಾರನ ಆರ್ಥಿಕ ಸ್ಥಿತಿ, ಸಾಲದ ಮೊತ್ತ ಇತ್ಯಾದಿಗಳನ್ನು ನೋಡಿದ ನಂತರ ಇದನ್ನು ನಿರ್ಧರಿಸಲಾಗುತ್ತದೆ.

24 ವರ್ಷದಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನೀವು ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಕೆವೈಸಿ ಪ್ರಮಾಣಪತ್ರ ಮತ್ತು ವೋಟರ್ ಐಡಿ ಮುಂತಾದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

ಮುದ್ರಾ ಲೋನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

  • https://www.mudra.org.in/ ವೆಬ್‌ಸೈಟ್‌ನಿಂದ ಸಾಲದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
  • ಶಿಶು ಸಾಲದ ಫಾರ್ಮ್ ಭಿನ್ನವಾಗಿದ್ದು, ತರುಣ್ ಮತ್ತು ಕಿಶೋರ್ ಸಾಲಕ್ಕೆ ಒಂದೇ ರೀತಿಯ ಫಾರ್ಮ್‌ ಇದೆ.
  • ಸಾಲದ ಅರ್ಜಿ ನಮೂನೆಯಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
  • ಸರಿಯಾದ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರು, ವಿಳಾಸ ಇತ್ಯಾದಿಗಳನ್ನು ಒದಗಿಸಿ.
  • ನಿಮ್ಮ ವ್ಯಾಪಾರವನ್ನು ಎಲ್ಲಿ ಪ್ರಾರಂಭಿಸಲು ನೀವು ಬಯಸುತ್ತೀರಿ ಎಂಬುದರ ಕುರಿತು ಮಾಹಿತಿಯನ್ನು ನೀಡಿ.
  • ಒಬಿಸಿ, ಎಸ್‌ಸಿ/ಎಸ್‌ಟಿ ವರ್ಗಗಳ ಅಡಿಯಲ್ಲಿ ಬರುವ ಅರ್ಜಿದಾರರು ತಮ್ಮ ಜಾತಿ ಪ್ರಮಾಣಪತ್ರದ ಪುರಾವೆಯನ್ನು ಒದಗಿಸಿ.
  • 2 ಪಾಸ್‌ಪೋರ್ಟ್ ಫೋಟೋಗಳನ್ನು ನೀಡಿ.
  • ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್‌ಗೆ ಹೋಗಿ ನೀಡಿ, ಎಲ್ಲಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ.
  • ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ನಿಮ್ಮಿಂದ ಉದ್ಯಮದ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಅದರ ಆಧಾರದ ಮೇಲೆ ಮುದ್ರಾ ಯೋಜನೆಯಡಿ ಸಾಲಕ್ಕೆ ಅನುಮೋದನೆ ನೀಡುತ್ತಾರೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಬಡ್ಡಿ ದರಗಳು ವಿವಿಧ ಬ್ಯಾಂಕ್‌ಗಳಲ್ಲಿ ವಿಭಿನ್ನವಾಗಿರಬಹುದು. ಮುದ್ರಾ ಸಾಲಕ್ಕೆ ವಿವಿಧ ಬ್ಯಾಂಕ್‌ಗಳು ವಿಭಿನ್ನ ಬಡ್ಡಿ ದರಗಳನ್ನು ವಿಧಿಸಬಹುದು. ಬಡ್ಡಿ ದರವು ಸಾಲಗಾರನ ವ್ಯವಹಾರದ ಸ್ವರೂಪ ಮತ್ತು ಅದಕ್ಕೆ ಸಂಬಂಧಿಸಿದ ಅಪಾಯವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಕನಿಷ್ಠ ಬಡ್ಡಿ ದರವು ಶೇ. 10 ರಿಂದ ಗರಿಷ್ಠ ಶೇ. 12ರವರೆಗೆ ಇರುತ್ತದೆ.

ಇದುವರೆಗೂ ಈ ಯೋಜನೆಯ ಅಡಿಯಲ್ಲಿ ಅದೆಷ್ಟು ಸಾಲವನ್ನು ನೀಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.

https://www.mudra.org.in/

4 – ಸುರಕ್ಷಾ ಭೀಮ ಯೋಜನೆ 

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಎಂಬುದು ಅಪಘಾತ ವಿಮೆ ಯೋಜನೆ. ಬಡವರು ಮತ್ತು ಕಡಿಮೆ ಆದಾಯದವರಿಗೆ ಅನುಕೂಲ ಕಲ್ಪಿಸಲು ಮೋದಿ ಸರ್ಕಾರವು ಈ ಯೋಜನೆಯನ್ನು ಮೇ 8, 2015 ರಂದು ಜಾರಿಗೆ ತಂದಿತು.. ಒಂದು ವೇಳೆ ಅಪಘಾತದಲ್ಲಿ ಸಾವು ಸಂಭವಿಸಿದರೆ ಮತ್ತು ಅಂಗವೈಕಲ್ಯವಾದರೆ ಒಂದು ವರ್ಷದ ಅವಧಿಗೆ ಇನ್ಷೂರೆನ್ಸ್ ಕವರ್ ಆಗುತ್ತದೆ. ಅಲ್ಲದೆ ಈ ಯೋಜನೆಯಡಿ ವಿಮೆಯನ್ನು ವಾರ್ಷಿಕ ಪ್ರೀಮಿಯಂ ಪಾವತಿಸುವ ಮೂಲಕ ನವೀಕರಣ ಮಾಡಬಹುದು. 18ರಿಂದ 70 ವರ್ಷ ವಯೋಮಾನದವರು, ಉಳಿತಾಯ ಖಾತೆ ಹೊಂದಿರುವವರು ಈ ಯೋಜನೆಗೆ ಸೇರ್ಪಡೆ ಆಗಬಹುದು. ಒಂದು ವೇಳೆ ಅರ್ಜಿದಾರರು ಆತ್ಮಹತ್ಯೆ ಮಾಡಿಕೊಂಡಲ್ಲಿ ಮೃತರ ಸಂಬಂಧಿಕರಿಗೆ ಈ ಯೋಜನೆಯ ಅನುಕೂಲ ದೊರೆಯುವುದಿಲ್ಲ. ಆದರೆ ಕೊಲೆಯಾಗಿ, ಸಾವು ಸಂಭವಿಸಿದಲ್ಲಿ ಆಗ ಕವರ್ ಆಗುತ್ತದೆ ಮತ್ತು ಭಾಗಶಃ ಅಂಗವೈಕಲ್ಯವಾದರೂ ಕೂಡ ವಿಮೆ ಹಣಕ್ಕಾಗಿ ಕ್ಲೈಮ್‌ ಮಾಡಬಹುದು.

ಯೋಜನೆಯ ಅರ್ಹತಾ ಮಾನದಂಡಗಳು ಹೀಗಿವೆ:

  • 18ರಿಂದ 70ರ ವಯೋಮಾನದವರು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ (PMSBY) ಸೇರ್ಪಡೆ ಆಗಲು ಅರ್ಹರು.
  • ಒಂದು ವೇಳೆ ಜಂಟಿ ಬ್ಯಾಂಕ್ ಖಾತೆ ಆಗಿದ್ದಲ್ಲಿ ಬ್ಯಾಂಕ್ ಖಾತೆಯ ಎಲ್ಲರೂ ಈ ಯೋಜನೆಗೆ ಸೇರ್ಪಡೆ ಆಗಲು ಮುಕ್ತರು.
  • ಈ ಯೋಜನೆ ಅಡಿಯಲ್ಲಿ ಅನಿವಾಸಿ ಭಾರತೀಯರು ಸಹ ಅರ್ಹರು. ಇನ್ನು ಕ್ಲೇಮ್ ವಿಚಾರಕ್ಕೆ ಬಂದಲ್ಲಿ ಭಾರತದ ಕರೆನ್ಸಿಯಲ್ಲಿ ನೀಡಲಾಗುತ್ತದೆ.
  • ಹಲವು ಕಡೆ ಖಾತೆ ಇದ್ದಾಗ್ಯೂ ಒಂದು ಬ್ಯಾಂಕ್ ಖಾತೆ ಮೂಲಕ ಮಾತ್ರ ಈ ಯೋಜನೆಗೆ ಸೇರ್ಪಡೆ ಆಗುವುದಕ್ಕೆ ಸಾಧ್ಯ.

ಈ ಯೋಜನೆಯಡಿಯಲ್ಲಿ, ಪಾಲಿಸಿದಾರರಿಗೆ 2 ಲಕ್ಷ ರೂಪಾಯಿ ಜೀವ ವಿಮಾ ಸಿಗಲಿದ್ದು ಇದಕ್ಕಾಗಿ ಪ್ರತಿ ವರ್ಷ ಕೇವಲ 12 ರೂಪಾಯಿ ಪಾವತಿಸಬೇಕು. ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ 18-70 ವರ್ಷ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರು ಯೋಜನೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇದುವರೆಗೂ ಈ ಯೋಜನೆಯ ಲಾಭವನ್ನು ಅದೆಷ್ಟು ಜನಗಳು ಪಡೆದುಕೊಂಡಿದ್ದಾರೆ ಮತ್ತು ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.

https://www.jansuraksha.gov.in/

5 – ಅಟಲ್ ಪೆನ್ಶನ್ ಯೋಜನೆ

ಪ್ರಧಾನ ಮಂತ್ರಿ ಅಟಲ್ ಪೆನ್ಷನ್ ಯೋಜನಾ (APY- Atal Pension Yojana) ಸರ್ಕಾರದಿಂದ ನಡೆಸಲಾಗುವ ವೃದ್ಧಾಪ್ಯ ಪಿಂಚಣಿ ಯೋಜನೆಗಳಲ್ಲಿ ಒಂದು. ಮೇ 9, 2015 ರಂದು ಶುರುವಾದ ಈ ಯೋಜನೆಯು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಬಹಳ ಅನುಕೂಲವಾಗಿದೆ. 18 ರಿಂದ 40 ವರ್ಷದ ವಯೋಮಾನದ ಯಾವುದೇ ಭಾರತೀಯ ಪ್ರಜೆಯು ಅಟಲ್ ಪೆನ್ಷನ್ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಬಹುದು. ಕನಿಷ್ಠ 20 ವರ್ಷ ಅವಧಿಯವರೆಗೆ ಪೆನ್ಷನ್ ನಿಧಿಗೆ ಹಣ ಪೂರೈಸಬೇಕು.

ಅಟಲ್ ಪೆನ್ಷನ್ ಯೋಜನೆಯ ಸದಸ್ಯರು 60 ವರ್ಷದ ಬಳಿಕ ಪ್ರತೀ ತಿಂಗಳು 1,000 ರೂಪಾಯಿಯಿಂದ 5,000 ವರೆಗೆ ಕನಿಷ್ಠ ಖಾತ್ರಿ ಪಿಂಚಣಿ ಪಡೆಯಬಹುದು. ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಆದಾಯ ತೆರಿಗೆ ಪಾವತಿಸುವವರಲ್ಲದವರಿಗೆ ಸರ್ಕಾರ ವರ್ಷಕ್ಕೆ ಒಂದು ಸಾವಿರ ರೂವರೆಗೂ ಕೊಡುಗೆ ನೀಡುತ್ತದೆ.

ಈ ಯೋಜನೆ ಪಡೆಯಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. 60ರ ವಯಸ್ಸಿನವರೆಗೂ ಕೊಡುಗೆ ನೀಡುತ್ತಾ ಹೋಗಬಹುದು. 18ನೇ ವಯಸ್ಸಿನಲ್ಲಿ ಈ ಸ್ಕೀಮ್ ಪಡೆದರೆ ಒಟ್ಟು 42 ವರ್ಷ ಕಾಲ ಹೂಡಿಕೆ ಮಾಡಲು ಗರಿಷ್ಠ ಅವಕಾಶ ಇರುತ್ತದೆ.

ನಿಮ್ಮ ವಯಸ್ಸು 30 ವರ್ಷವಾಗಿದ್ದರೆ 30 ವರ್ಷ ಹೂಡಿಕೆಗೆ ಅವಕಾಶ ಇರುತ್ತದೆ. ನಿವೃತ್ತಿ ಬಳಿಕ ನೀವು 1,000 ರೂ ಪಿಂಚಣಿ ಪಡೆಯಬೇಕೆಂದರೆ 30ನೇ ವಯಸ್ಸಿನಿಂದ ಆರಂಭಿಸಿ ಪ್ರತೀ ತಿಂಗಳು 116 ರೂ ಕಟ್ಟಬೇಕು. 40ನೇ ವಯಸ್ಸಿನಲ್ಲಿ ಈ ಯೋಜನೆ ಸ್ವೀಕರಿಸಿದರೆ 1,000 ಪಿಂಚಣಿ ಪಡೆಯಲು 20 ವರ್ಷ ಕಾಲ ತಿಂಗಳಿಗೆ 264 ರೂ ಕಟ್ಟಿಕೊಂಡು ಹೋಗಬೇಕು.

ಇನ್ನು, 5,000 ರೂ ಮಾಸಿಕ ಪಿಂಚಣಿ ಬೇಕೆಂದರೆ, 30ನೇ ವಯಸ್ಸಿನಿಂದ 30 ವರ್ಷ ಕಾಲ ತಿಂಗಳಿಗೆ 577 ರೂ ಕಟ್ಟಬೇಕು. 40ನೇ ವಯಸ್ಸಿನಲ್ಲಿ ಸ್ಕೀಮ್ ಆರಂಭಿಸಿದರೆ ತಿಂಗಳಿಗೆ 1,318 ರೂ ಕಟ್ಟಬೇಕು.

ಒಂದು ವೇಳೆ ಸದಸ್ಯನು ಮೃತಪಟ್ಟರೆ ನಾಮಿನಿಗೆ ಪರಿಹಾರ ಸಿಗುತ್ತದೆ. 1,000 ರೂ ಮಾಸಿಕ ಪಿಂಚಣಿ ಪಡೆಯುತ್ತಿರುವವರು ಮೃತಪಟ್ಟರೆ ನಾಮಿನಿಗೆ 1.7 ಲಕ್ಷ ರೂ ಸಿಗುತ್ತದೆ. 5,000 ರೂ ಮಾಸಿಕ ಪೆನ್ಷನ್ ಪಡೆಯುತ್ತಿರುವವರು ಮೃತಪಟ್ಟರೆ ಅವರ ವಾರಸುದಾರರಿಗೆ 8.5 ಲಕ್ಷ ರೂ ಸಿಗುತ್ತದೆ.

ಯಾವುದೇ ರಾಷ್ಟ್ರೀಕೃತ ಬ್ಯಾಂಕ್​ಗೆ ಹೋಗಿ ಅಲ್ಲಿ ಈ ಸ್ಕೀಮ್ ಆರಂಭಿಸಬಹುದು. ಸಂಬಂಧಿತ ಅರ್ಜಿ ಭರ್ಜಿ ಮಾಡಿ, ಜೊತೆಯಲ್ಲಿ ಆಧಾರ್ ದಾಖಲೆಯನ್ನು ಲಗತ್ತಿಸಿ ಬ್ಯಾಂಕ್​ನಲ್ಲಿ ಸಲ್ಲಿಸಬೇಕು. ಆನ್​ಲೈನ್​ನಲ್ಲಿ ಈ ಸ್ಕೀಮ್ ಪಡೆಯಲು ಆಗುವುದಿಲ್ಲ.

ಇದುವರೆಗೂ ಈ ಯೋಜನೆಯ ಲಾಭವನ್ನು 5.25 ಕೋಟಿಗಿಂತ ಹೆಚ್ಚು ಜನರು ದೇಶದಲ್ಲಿ ಪಡೆದುಕೊಂಡಿದ್ದಾರೆ. ಇದರ ಕುರಿತ ಹೆಚ್ಚಿನ ಮಾಹಿತಿ ಮತ್ತು ಪಲಾನುಭವಿಗಳ ಕುರಿತು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.

https://pib.gov.in/

6 – ಜೀವನ್ ಜ್ಯೋತಿ ಭೀಮ ಯೋಜನೆ

ಮೋದಿ ಸರ್ಕಾರವು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯನ್ನು (PMJJBY) ಮೇ 9, 2015ರಂದು ಜಾರಿಗೆ ತಂದಿತು. ಈ ಯೋಜನೆಯ ಅಡಿಯಲ್ಲಿ ವ್ಯಕ್ತಿಯು 55 ವರ್ಷಕ್ಕಿಂತ ಮೊದಲು ಮರಣಹೊಂದಿದರೆ ಸರ್ಕಾರವು ಅವರಿಗೆ ಎರಡು ಲಕ್ಷ ರೂಪಾಯಿ ಮೊತ್ತದ ಜೀವ ವಿಮಾ ಪಾಲಿಸಿಯನ್ನು ನೀಡುತ್ತದೆ.

ಈ ಯೋಜನೆಯಡಿಯಲ್ಲಿ ಪಾಲಿಸಿದಾರರು ವಾರ್ಷಿಕ ರೂ 330 ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ, ಇದನ್ನು ಪ್ರತಿ ವರ್ಷ ಮೇ ತಿಂಗಳಲ್ಲಿ ಪಾಲಿಸಿದಾರರ ಉಳಿತಾಯ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಈ ಯೋಜನೆಯು EWS ಮತ್ತು BPL ಸೇರಿದಂತೆ ಎಲ್ಲಾ ನಾಗರಿಕರಿಗೆ ಪ್ರೀಮಿಯಂನ ಕೈಗೆಟುಕುವ ದರವನ್ನು ಒದಗಿಸುತ್ತದೆ.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಪ್ರಯೋಜನಗಳು :

  • ಈ ಯೋಜನೆಯು ದೇಶದ 18 ರಿಂದ 50 ವರ್ಷ ವಯಸ್ಸಿನ ನಾಗರಿಕರಿಗೆ ಲಭ್ಯವಿದೆ.
  • ಪಾಲಿಸಿದಾರರ ಮರಣದ ನಂತರ, ಪಾಲಿಸಿದಾರರ ಕುಟುಂಬವು ವರ್ಷದಿಂದ ವರ್ಷಕ್ಕೆ ಈ ಯೋಜನೆಯ ಅಡಿಯಲ್ಲಿ PMJJBY ಅನ್ನು ನವೀಕರಿಸಬಹುದು. ಈ ಯೋಜನೆಯ ಸದಸ್ಯರು ವಾರ್ಷಿಕ ರೂ 330 ಪ್ರೀಮಿಯಂ ಪಾವತಿಸಬೇಕು. ರೂ 2 ಲಕ್ಷ ಮೌಲ್ಯದ ಜೀವ ವಿಮಾ ಪಾಲಿಸಿಯನ್ನು ಒದಗಿಸಲಾಗುತ್ತದೆ.
  • ಪ್ರತಿ ವಾರ್ಷಿಕ ಕವರೇಜ್ ಅವಧಿಯಲ್ಲಿ, ಈ ಯೋಜನೆಯ ಅಡಿಯಲ್ಲಿ ವಾರ್ಷಿಕ ಕಂತನ್ನು ಮೇ 31 ರೊಳಗೆ ಪಾವತಿಸಲಾಗುತ್ತದೆ.
  • ಈ ದಿನಾಂಕದೊಳಗೆ ವಾರ್ಷಿಕ ಕಂತನ್ನು ಠೇವಣಿ ಮಾಡಲು ಸಾಧ್ಯವಾಗದಿದ್ದರೆ, ಸಂಪೂರ್ಣ ವಾರ್ಷಿಕ ಪ್ರೀಮಿಯಂ ಅನ್ನು ಏಕರೂಪದ ಪಾವತಿಯಲ್ಲಿ ಪಾವತಿಸಿ ಮತ್ತು ನಂತರದ ದಿನಾಂಕದಂದು ಉತ್ತಮ ಆರೋಗ್ಯವನ್ನು ಸ್ವಯಂ ಘೋಷಿಸುವ ಮೂಲಕ ಪಾಲಿಸಿಯನ್ನು ನವೀಕರಿಸಬಹುದು.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅರ್ಹತೆ :

  • ಈ ಯೋಜನೆಯಡಿ ಪಾಲಿಸಿಗಳನ್ನು ತೆಗೆದುಕೊಳ್ಳುವ ನಾಗರಿಕರು 18 ರಿಂದ 50 ವರ್ಷ ವಯಸ್ಸಿನವರಾಗಿರಬೇಕು.
  • ಪಾಲಿಸಿದಾರರು ವಾರ್ಷಿಕ ರೂ 330 ಪ್ರೀಮಿಯಂ ಪಾವತಿಸಬೇಕಾಗುತ್ತದೆ.
  • ಈ ಯೋಜನೆಯಡಿಯಲ್ಲಿ, ಪಾಲಿಸಿದಾರ/ಅರ್ಜಿದಾರರು ಬ್ಯಾಂಕ್ ಹೊಂದಿರಬೇಕು ಖಾತೆ ಏಕೆಂದರೆ ಸರ್ಕಾರವು ಈ ಯೋಜನೆಯಡಿಯಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಮೆಚ್ಯೂರಿಟಿ ಹಣವನ್ನು ನೇರವಾಗಿ ವರ್ಗಾಯಿಸುತ್ತದೆ.
  • ಚಂದಾದಾರರು ಪ್ರತಿ ವರ್ಷ ಮೇ 31 ರಂದು ಅಥವಾ ಮೊದಲು ಸ್ವಯಂ-ಡೆಬಿಟ್ ಸಮಯದಲ್ಲಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಅಗತ್ಯವಿರುವ ಬಾಕಿಯನ್ನು ಇಟ್ಟುಕೊಳ್ಳಬೇಕು.

ಜೀವನ್ ಜ್ಯೋತಿ ಬಿಮಾ ಯೋಜನೆಯ ದಾಖಲೆಗಳು :

  • ಅರ್ಜಿದಾರರ ಆಧಾರ್ ಕಾರ್ಡ್
  • ಗುರುತಿನ ಚೀಟಿ
  • ಬ್ಯಾಂಕ್ ಖಾತೆಯ ಪಾಸ್‌ಬುಕ್
  • ಮೊಬೈಲ್ ನಂಬರ
  • ಪಾಸ್ಪೋರ್ಟ್ ಗಾತ್ರದ ಫೋಟೋ

ಈ ಯೋಜನೆಯ ಲಾಭವನ್ನು ಪಡೆದುಕೊಂಡಿರುವ ಪಲಾನುಭವಿಗಳ ಸಂಪೂರ್ಣ ವಿವರ ಈ ಕೆಳಕಂಡಂತೆ ಇದೆ.

ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.

https://www.jansuraksha.gov.in/

7 – ಸ್ಮಾರ್ಟ್ ಸಿಟಿ ಯೋಜನೆ

ನಗರಗಳ ಅಭಿವೃದ್ಧಿಯ ಜೊತೆಗೆ ಜನರ ಜೀವನ ಮಟ್ಟವನ್ನು ಸುಧಾರಿಸುವುದು ಮತ್ತು ತಂತ್ರಜ್ಞಾನದ ಸಹಾಯದಿಂದ ನಾಗರಿಕರಿಗೆ ಉತ್ತಮ ಜೀವನ ಗುಣಮಟ್ಟ ಒದಗಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ‘ಸ್ಮಾರ್ಟ್ ಸಿಟಿ ಮಿಷನ್‌’ ಅನ್ನು ಜೂನ್ 25, 2015 ರಂದು ಜಾರಿಗೆ ತಂದಿತು.

ಈ ಯೋಜನೆಯಡಿ ದೇಶಾದ್ಯಂತ 100 ನಗರಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಕರ್ನಾಟಕದಲ್ಲಿ 7 ನಗರಗಳು ಕೂಡ ಆಯ್ಕೆಯಾಗಿವೆ. ಆಯ್ಕೆಯಾದ ನಗರಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ, ಇದರಿಂದ ಆ ನಗರಗಳಲ್ಲಿ ಇರುವ ನಾಗರಿಕರಿಗೆ ಸ್ವಚ್ಛ ಮತ್ತು ಸುಸ್ಥಿರ ವಾತಾವರಣವನ್ನು ನೀಡಬಹುದು.

ಈ  ಯೋಜನೆಯಡಿ, ನಗರಗಳಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸುವ ಕೆಲಸವನ್ನು ಕೂಡ ಮಾಡಲಾಗುತ್ತಿದೆ. ತಂತ್ರಜ್ಞಾನದ ಸಹಾಯದಿಂದ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸಲು ಈ ಯೋಜನೆ ಆರಂಭಿಸಲಾಯಿತು.

ಸ್ಮಾರ್ಟ್ ಸಿಟಿ ಮಿಷನ್‌ ವೆಬ್‌ಸೈಟ್ ಪ್ರಕಾರ, ಈ ಯೋಜನೆಯಡಿ 5929 ಯೋಜನೆಗಳಿಗೆ 178,492 ಕೋಟಿ ರೂ. ಟೆಂಡರ್ ನೀಡಲಾಗಿದೆ. ₹146,466 ಕೋಟಿ ಮೌಲ್ಯದ 5245 ಯೋಜನೆಗಳಿಗೆ ವರ್ಕ್ ಆರ್ಡರ್ ನೀಡಲಾಗಿದೆ. ₹45,264 ಕೋಟಿ ಮೌಲ್ಯದ 2673 ಯೋಜನೆಗಳು ಪೂರ್ಣಗೊಂಡಿವೆ.

ಈ ಯೋಜನೆಯಡಿ ಇದುವರೆಗೂ 6,925 ಪ್ರೊಜೆಕ್ಟ್ಸ್ ಸಂಪೂರ್ಣವಾಗಿವೆ, ಅಂದರೆ ಶೇಕಡ 87 ರಷ್ಟು. ಇದರ ಕುರಿತ ಸಂಪೂರ್ಣ ವಿವರ ಮತ್ತು ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.

https://smartcities.gov.in/

8 – ಅಮೃತ್ ಯೋಜನೆ

ಅಮೃತ್ ಯೋಜನೆಯನ್ನು (Atal Mission for Rejuvenation and Urban Transformation – AMRUT) ಮೋದಿ ಸರ್ಕಾರವು ಜೂನ್ 24, 2015 ರಂದು ಜಾರಿಗೆ ತಂದಿತು. ದೇಶದಲ್ಲಿರುವ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸಲು, ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮುಂತಾದ ಮೂಲ ಸೌಕರ್ಯಗಳನ್ನು ಸುಧಾರಿಸಲು ಈ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಯಿತು.2022 ರವರೆಗೂ ಜಾರಿಯಲ್ಲಿದ್ದ ಈ ಯೋಜನೆಯ ಶೇ.100ರಷ್ಟು ವೆಚ್ಚವನ್ನು ಮೋದಿ ಸರ್ಕಾರವೇ ಭರಿಸಿತು.

ಅಮೃತ್‌ ಯೋಜನೆಯ ಪ್ರಮುಖಾಂಶಗಳು

  • ಅಮೃತ್ ಯೋಜನೆಯಡಿ ನಗರಗಳನ್ನು ಸುಧಾರಣೆ ಮಾಡುವುದು
  • ಪ್ರತಿ ಮನೆಗೆ ನೀರು ಪೂರೈಕೆಯನ್ನು ಖಾತ್ರಿಪಡಿಸುವುದು.
  • ದೇಶದ ಹಳ್ಳಿಗಳು ಮತ್ತು ನಗರಗಳಲ್ಲಿ ಪ್ರತಿ ಮನೆಗೆ ಒಳಚರಂಡಿ ಸಂಪರ್ಕ ಒದಗಿಸುವುದು.
  • ನಗರಗಳ ಸೌಂದರ್ಯ ಹೆಚ್ಚಿಸಲು ಹಸಿರು ತುಂಬಿದ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು, ಜೊತೆಗೆ ಉದ್ಯಾನವನಗಳು ಮತ್ತು ತೆರೆದ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು.
  • ಮಾಲಿನ್ಯ ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆ ಉತ್ತೇಜಿಸುವ ಜೊತೆಗೆ ಜನರನ್ನು ನಡೆಯಲು ಮತ್ತು ಸೈಕ್ಲಿಂಗ್ ಮಾಡಲು ಉತ್ತೇಜಿಸಿ.
  • ವಿದ್ಯುತ್ ಕೊರತೆ ಇರುವ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಮಾಡುವುದು.
  • ತ್ಯಾಜ್ಯ ನಿರ್ವಹಣೆ ಸುಧಾರಿಸಲು.
  • ನಗರಗಳಲ್ಲಿ ವರ್ಷಪೂರ್ತಿ ಮಳೆ ನೀರು ಕೊಯ್ಲು ಉತ್ತೇಜಿಸುವುದು.
  • ರಸ್ತೆಗಳ ನಿರ್ವಹಣೆ ಹಾಗೂ ಹೊಸ ರಸ್ತೆಗಳ ನಿರ್ಮಾಣ.

ಇಲ್ಲಿಯವರೆಗು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ₹82,222 ಕೋಟಿ ಮೌಲ್ಯದ 5,873 ಯೋಜನೆಗಳನ್ನು ಕೈಗೆತ್ತಿಕೊಂಡಿವೆ, ಅದರಲ್ಲಿ ₹32,793 ಕೋಟಿ ಮೌಲ್ಯದ 4,676 ಯೋಜನೆಗಳು ಪೂರ್ಣಗೊಂಡಿವೆ ಮತ್ತು ₹49,430 ಕೋಟಿ ಮೌಲ್ಯದ 1,197 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ. ಇದಲ್ಲದೆ, ಸುಮಾರು ₹ 66,313 ಕೋಟಿ ಮೌಲ್ಯದ ಒಟ್ಟಾರೆ ಕಾಮಗಾರಿಗಳನ್ನು ಭೌತಿಕವಾಗಿ ಪೂರ್ಣಗೊಳಿಸಲಾಗಿದೆ ಮತ್ತು ₹ 59,615 ಕೋಟಿ ವೆಚ್ಚ ಮಾಡಲಾಗಿದೆ. ಇದರ ಕುರಿತ ಸಂಪೂರ್ಣ ವಿವರ ಮತ್ತು ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.

https://pib.gov.in/PressReleasePage.aspx?PRID=1885837

9 – ಡಿಜಿಟಲ್ ಇಂಡಿಯಾ ಯೋಜನೆ

ಡಿಜಿಟಲ್ ಪ್ರವೇಶ, ಡಿಜಿಟಲ್ ಸೇರ್ಪಡೆ, ಡಿಜಿಟಲ್ ಸಬಲೀಕರಣ ಮತ್ತು ಡಿಜಿಟಲ್ ವಿಭಜನೆಯನ್ನು ಖಾತ್ರಿಪಡಿಸುವ ಮೂಲಕ ಭಾರತವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನ ಆಧಾರಿತ ಆರ್ಥಿಕತೆಯಾಗಿ ಪರಿವರ್ತಿಸುವ ದೃಷ್ಟಿಯೊಂದಿಗೆ ಮೋದಿ ಸರ್ಕಾರವು ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು 2015ರ ಜುಲೈ 2 ರಂದು ಜಾರಿಗೆ ತಂದಿತು.

ಈ ಕಾರ್ಯಕ್ರಮವು ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿದೆ, ಅವುಗಳೆಂದರೆ ಡಿಜಿಟಲ್ ಮೂಲಸೌಕರ್ಯವು ಪ್ರತಿಯೊಬ್ಬ ನಾಗರಿಕರಿಗೆ ಒಂದು ಪ್ರಮುಖ ಉಪಯುಕ್ತತೆ, ಆಡಳಿತ ಮತ್ತು ಬೇಡಿಕೆಯ ಸೇವೆಗಳು ಮತ್ತು ನಾಗರಿಕರ ಡಿಜಿಟಲ್ ಸಬಲೀಕರಣ.

ದೇಶಾದ್ಯಂತ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ MeitY ಕೈಗೊಂಡಿರುವ ಕೆಲವು ಪ್ರಮುಖ ಉಪಕ್ರಮಗಳ ಪ್ರಸ್ತುತ ಸ್ಥಿತಿ ಹೀಗಿದೆ:

  • ಆಧಾರ್: ಆಧಾರ್ 12 ಅಂಕಿಗಳ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಆಧಾರಿತ ಗುರುತನ್ನು ಒದಗಿಸುತ್ತದೆ ಆಧಾರ್‌ಗೆ ಶಾಸನಬದ್ಧ ಬೆಂಬಲವನ್ನು ನೀಡಲು ‘ಆಧಾರ್ ಕಾಯಿದೆ, 2016’ ಅನ್ನು ಮಾರ್ಚ್ 26, 2016 ರಂದು ಜಾರಿಗೆ ತರಲಾಯಿತು. ಇದುವರೆಗೂ 5 ಕೋಟಿಗೂ ಹೆಚ್ಚು ನಿವಾಸಿಗಳನ್ನು ಆಧಾರ್ ನಲ್ಲಿ ನೋಂದಾಯಿಸಲಾಗಿದೆ.
  • Common Services Centres– CSC ಗಳು ಗ್ರಾಮ ಮಟ್ಟದ ವಾಣಿಜ್ಯೋದ್ಯಮಿಗಳ (VLEs) ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಮೋಡ್‌ನಲ್ಲಿ ಸರ್ಕಾರಿ ಮತ್ತು ವ್ಯಾಪಾರ ಸೇವೆಗಳನ್ನು ನೀಡುತ್ತಿವೆ. ಈ CSCಗಳು 400 ಕ್ಕೂ ಹೆಚ್ಚು ಡಿಜಿಟಲ್ ಸೇವೆಗಳನ್ನು ನೀಡುತ್ತಿದ್ದು. ಇಲ್ಲಿಯವರೆಗೆ, 21 ಲಕ್ಷ ಸಿಎಸ್‌ಸಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ, ಅವುಗಳಲ್ಲಿ 4.14 ಲಕ್ಷ ಸಿಎಸ್‌ಸಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜಸ್ಥಾನ ರಾಜ್ಯದಲ್ಲಿ 23,035 ಸಿಎಸ್‌ಸಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 18823 ಸಿಎಸ್‌ಸಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ.
  • DigiLocker: ಡಿಜಿಟಲ್ ಲಾಕರ್ ಡಿಜಿಟಲ್ ರೆಪೊಸಿಟರಿಗಳಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ವಿತರಕರಿಗೆ ರೆಪೊಸಿಟರಿಗಳು ಮತ್ತು ಗೇಟ್‌ವೇಗಳ ಸಂಗ್ರಹದೊಂದಿಗೆ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ. ಡಿಜಿಟಲ್ ಲಾಕರ್ 13.7 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ ಮತ್ತು 2,311 ವಿತರಕರ ಸಂಸ್ಥೆಗಳಿಂದ 562 ಕೋಟಿಗೂ ಹೆಚ್ಚು ದಾಖಲೆಗಳನ್ನು ಡಿಜಿಲಾಕರ್ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ.
  • Unified Mobile Application for New-age Governance (UMANG)– ಮೊಬೈಲ್ ಮೂಲಕ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವುದಕ್ಕಾಗಿ ಇದನ್ನು ಜಾರಿಗೆ ತರಲಾಯಿತು.. UMANGನಲ್ಲಿ 1668 ಕ್ಕೂ ಹೆಚ್ಚು ಇ-ಸೇವೆಗಳು ಮತ್ತು 20,197 ಕ್ಕೂ ಹೆಚ್ಚು ಬಿಲ್ ಪಾವತಿ ಸೇವೆಗಳು ಲಭ್ಯವಿವೆ.
  • e-Sign:   ಇ-ಸೈನ್ ಸೇವೆಯು ಕಾನೂನುಬದ್ಧವಾಗಿ ಸ್ವೀಕಾರಾರ್ಹ ರೂಪದಲ್ಲಿ ನಾಗರಿಕರಿಂದ ಆನ್‌ಲೈನ್‌ನಲ್ಲಿ ಫಾರ್ಮ್‌ಗಳು/ಡಾಕ್ಯುಮೆಂಟ್‌ಗಳಿಗೆ ತ್ವರಿತ ಸಹಿ ಮಾಡಲು ಅನುಕೂಲ ಮಾಡುತ್ತದೆ. UIDAI ಯ OTP ಆಧಾರಿತ ದೃಢೀಕರಣ ಸೇವೆಗಳನ್ನು ಬಳಸಿಕೊಂಡು ವಿವಿಧ ಅಪ್ಲಿಕೇಶನ್‌ಗಳಿಂದ ಸೇವೆಗಳನ್ನು ಹತೋಟಿಗೆ ತರಲಾಗುತ್ತಿದೆ. ಎಲ್ಲಾ ಏಜೆನ್ಸಿಗಳಿಂದ ನೀಡಲಾದ 31.08 ಕೋಟಿಗೂ ಹೆಚ್ಚು ಇ-ಸೈನ್, ಸಿಡಿಎಸಿಯಿಂದ 7.01 ಕೋಟಿ ಇ-ಸೈನ್ ನೀಡಲಾಗಿದೆ.
  • MyGov –ನಾಗರಿಕರ ಸಹಭಾಗಿತ್ವದ ಆಡಳಿತವನ್ನು ಸುಲಭಗೊಳಿಸಲು MyGov ಯನ್ನು ಅಭಿವೃದ್ಧಿಪಡಿಸಲಾಯಿತು. ಇದುವರೆಗೂ MyGov ಪ್ಲಾಟ್‌ಫಾರ್ಮ್‌ನಲ್ಲಿ 2.76+ ಕೋಟಿ ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ.
  • MeriPehchaan –ರಾಷ್ಟ್ರೀಯ ಏಕ ಸೈನ್-ಆನ್ (NSSO) ಪ್ಲಾಟ್‌ಫಾರ್ಮ್ ಅನ್ನು ಜುಲೈ 2022 ರಲ್ಲಿ ಸರ್ಕಾರಿ ಪೋರ್ಟಲ್‌ಗಳಿಗೆ ಪ್ರವೇಶಿಸಲು ನಾಗರಿಕರಿಗೆ ಅನುಕೂಲವಾಗುವಂತೆ ಮೇರಿಪೆಹ್ಚಾನ್ ಅನ್ನು ಪ್ರಾರಂಭಿಸಲಾಗಿದೆ. NSSO ನೊಂದಿಗೆ ಸಂಯೋಜಿಸಲ್ಪಟ್ಟ ವಿವಿಧ ಸಚಿವಾಲಯಗಳು/ರಾಜ್ಯಗಳ ಒಟ್ಟು 4419 ಸೇವೆಗಳು ಇದರಲ್ಲಿ ಇವೆ.
  • National Rollout of eDistrict MMP: ಇ-ಜಿಲ್ಲೆಯು ಮಿಷನ್ ಮೋಡ್ ಪ್ರಾಜೆಕ್ಟ್ (MMP) ಆಗಿದ್ದು, ಇದು ಜಿಲ್ಲೆ ಅಥವಾ ಉಪ-ಜಿಲ್ಲಾ ಮಟ್ಟದಲ್ಲಿ ಗುರುತಿಸಲಾದ ಹೆಚ್ಚಿನ ಪ್ರಮಾಣದ ನಾಗರಿಕ ಕೇಂದ್ರಿತ ಸೇವೆಗಳ ವಿದ್ಯುನ್ಮಾನ ವಿತರಣೆಯ ಗುರಿಯನ್ನು ಹೊಂದಿದೆ. ಪ್ರಸ್ತುತ ಭಾರತದಾದ್ಯಂತ 709 ಜಿಲ್ಲೆಗಳಲ್ಲಿ 4,671 ಇ-ಸೇವೆಗಳನ್ನು ಪ್ರಾರಂಭಿಸಲಾಗಿದೆ.
  • Open Government Data Platform : ಡೇಟಾ ಹಂಚಿಕೆಯನ್ನು ಸುಲಭಗೊಳಿಸಲು ಮತ್ತು ವೈಯಕ್ತಿಕವಲ್ಲದ ಡೇಟಾದ ಮೇಲೆ ನಾವೀನ್ಯತೆಯನ್ನು ಉತ್ತೇಜಿಸಲು, ಓಪನ್ ಸರ್ಕಾರಿ ಡೇಟಾ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 12,940+ ಕ್ಯಾಟಲಾಗ್‌ಗಳಲ್ಲಿ 5.93 ಲಕ್ಷಕ್ಕೂ ಹೆಚ್ಚು ಡೇಟಾಸೆಟ್‌ಗಳನ್ನು ಪ್ರಕಟಿಸಲಾಗಿದೆ. ಪ್ಲಾಟ್‌ಫಾರ್ಮ್ 94.8 ಲಕ್ಷ ಡೌನ್‌ಲೋಡ್‌ಗಳನ್ನು ಸುಗಮಗೊಳಿಸಿದೆ.
  • eHospital/ Online Registration System (ORS):ಇ-ಹಾಸ್ಪಿಟಲ್ ಅಪ್ಲಿಕೇಶನ್ ಆಸ್ಪತ್ರೆಗಳ ಒಳಗಿನ ಕಾರ್ಯ ಮತ್ತು ಪ್ರಕ್ರಿಯೆಗಳ ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆಯಾಗಿದೆ. ಪ್ರಸ್ತುತ 753 ಆಸ್ಪತ್ರೆಗಳನ್ನು ಇ-ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ ಮತ್ತು ORS ನಿಂದ 68 ಲಕ್ಷ ಅಪಾಯಿಂಟ್‌ಮೆಂಟ್‌ಗಳನ್ನು ಬುಕ್ ಮಾಡುವುದರೊಂದಿಗೆ ದೇಶಾದ್ಯಂತ 557 ಆಸ್ಪತ್ರೆಗಳು ORS ಅನ್ನು ಅಳವಡಿಸಿಕೊಂಡಿವೆ.
  • CO-WIN –ಇದು ಕೋವಿಡ್-19 ಗಾಗಿ ನೋಂದಣಿ, ಅಪಾಯಿಂಟ್‌ಮೆಂಟ್ ವೇಳಾಪಟ್ಟಿ ಮತ್ತು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ನಿರ್ವಹಣೆಗೆ ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಸಿದ್ದಪಡಿಸಿದ ವೇದಿಕೆಯಾಗಿದೆ. ಇದುವರೆಗೂ ಇದರಲ್ಲಿ 110 ಕೋಟಿ ಜನರನ್ನು ನೋಂದಾಯಿಸಲಾಗಿದ್ದು 220 ಕೋಟಿ ಡೋಸ್ ಲಸಿಕೆಗಳ ಬಳಕೆಯನ್ನು ಸುಲಭಗೊಳಿಸಿದೆ.
  • Jeevan Pramaan: ಜೀವನ್ ಪ್ರಮಾಣ್ ಪಿಂಚಣಿದಾರರ ಜೀವನ ಪ್ರಮಾಣಪತ್ರವನ್ನು ಭದ್ರಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಯೋಜಿಸಿದೆ. ಈ ಉಪಕ್ರಮದೊಂದಿಗೆ, ಪಿಂಚಣಿದಾರನು ತನ್ನನ್ನು ಅಥವಾ ತನ್ನನ್ನು ವಿತರಣಾ ಏಜೆನ್ಸಿ ಅಥವಾ ಪ್ರಮಾಣೀಕರಣ ಪ್ರಾಧಿಕಾರದ ಮುಂದೆ ದೈಹಿಕವಾಗಿ ಪ್ರಸ್ತುತಪಡಿಸುವ ಅಗತ್ಯವಿಲ್ಲ. 2014 ರಿಂದ ಇಲ್ಲಿಯವರೆಗೂ 685.42 ಲಕ್ಷ ಡಿಜಿಟಲ್ ಲೈಫ್ ಪ್ರಮಾಣಪತ್ರಗಳನ್ನು ಪ್ರಕ್ರಿಯೆಗೊಳಿಸಲಾಗಿದೆ.
  • National Knowledge Network: ಉನ್ನತ ಕಲಿಕೆ ಮತ್ತು ಸಂಶೋಧನೆಯ ಸಂಸ್ಥೆಯನ್ನು ಪರಸ್ಪರ ಸಂಪರ್ಕಿಸಲು ಹೆಚ್ಚಿನ ವೇಗದ ಡೇಟಾ ಸಂವಹನ ಜಾಲವನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ, ಸಂಸ್ಥೆಗಳಿಗೆ 1752 ಲಿಂಕ್‌ಗಳನ್ನು ನಿಯೋಜಿಸಲಾಗಿದೆ ಮತ್ತು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. 522 NKN ಲಿಂಕ್‌ಗಳನ್ನು ಭಾರತದಾದ್ಯಂತ NIC ಜಿಲ್ಲಾ ಕೇಂದ್ರಗಳಿಗೆ ಸಂಪರ್ಕಿಸಲಾಗಿದೆ.
  • Pradhan Mantri Gramin Digital Saksharta Abhiyaan (PMGDISHA): 6 ಕೋಟಿ ಗ್ರಾಮೀಣ ಕುಟುಂಬಗಳನ್ನು (ಪ್ರತಿ ಮನೆಗೆ ಒಬ್ಬ ವ್ಯಕ್ತಿ) ಒಳಗೊಳ್ಳುವ ಮೂಲಕ ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಪ್ರಾರಂಭಿಸಲು “ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷಾರ್ಥ ಅಭಿಯಾನ (PMGDISHA)” ಎಂಬ ಹೊಸ ಯೋಜನೆಯನ್ನು ಸರ್ಕಾರ ಅನುಮೋದಿಸಿತು. ಇದರಲ್ಲಿ 6.63 ಕೋಟಿ ನೋಂದಾಯಿತ ಅಭ್ಯರ್ಥಿಗಳಿದ್ದು, ಈ ಪೈಕಿ 5.69 ಕೋಟಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಮತ್ತು 4.22 ಕೋಟಿ ಮಂದಿ ಪ್ರಮಾಣೀಕರಿಸಿದ್ದಾರೆ.
  • Unified Payment Interface (UPI) :ಇದೊಂದು ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾಗಿದ್ದು ಇದರಲ್ಲಿ ಇದುವರೆಗೂ ದೇಶದ 376 ಬ್ಯಾಂಕ್‌ಗಳನ್ನು ಸೇರಿಸಲಾಗಿದೆ ಮತ್ತು 11.9 ಲಕ್ಷ ಕೋಟಿ ಮೌಲ್ಯದ 730 ಕೋಟಿ ವಹಿವಾಟುಗಳು ಆಗಿವೆ.
  • FutureSkills Prime : NASSCOM ಸಹಯೋಗದೊಂದಿಗೆ MeitY FutureSkills PRIME ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಆಗ್ಮೆಂಟೆಡ್/ವರ್ಚುವಲ್ ರಿಯಾಲಿಟಿ, ಇಂಟರ್ನೆಟ್ ಆಫ್ ಥಿಂಗ್ಸ್, ಬಿಗ್ ಡಾಟಾ ಅನಾಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ ಪ್ರೊಸೆಸ್ ಆಟೊಮೇಷನ್, ಸಂಯೋಜಕ ಕ್ಲೌಡ್ ಪ್ರಿಂಟಿಂಗ್, 3ಡಿ ಸೇರಿದಂತೆ 10 ಹೊಸ/ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಐಟಿ ವೃತ್ತಿಪರರ ಮರು-ಕೌಶಲ್ಯ/ಅಪ್-ಕೌಶಲ್ಯವನ್ನು ಈ ಕಾರ್ಯಕ್ರಮವು ಹೊಂದಿದೆ.

       ಡಿಜಿಟಲ್ ಇಂಡಿಯಾ ಮಿಷನ್ ಯೋಜನೆಯ ಪ್ರಯೋಜನಗಳು :

  • ಡಿಜಿಟಲ್ ಇಂಡಿಯಾ ಯೋಜನೆಯು ಗ್ರಾಮೀಣ ಪ್ರದೇಶದ 12000 ಅಂಚೆ ಕಚೇರಿಗಳನ್ನು ವಿದ್ಯುನ್ಮಾನವಾಗಿ ಸಂಪರ್ಕಿಸಲು ಸಾಧ್ಯವಾಗಿಸಿತು.
  • ಸುಮಾರು 1.15 ಲಕ್ಷ ಗ್ರಾಮ ಪಂಚಾಯತ್‌ಗಳಲ್ಲಿ, ಭಾರತ್ ನೆಟ್ ಕಾರ್ಯಕ್ರಮದ ಅಡಿಯಲ್ಲಿ ರೂ 2, 74,246 ಕಿಮೀ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಅನ್ನು ಸಂಪರ್ಕಿಸಲಾಗಿದೆ.
  • ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಪ್ರವೇಶವನ್ನು ಒದಗಿಸುವ ಭಾರತೀಯ ಸರ್ಕಾರದ ರಾಷ್ಟ್ರೀಯ ಇ-ಆಡಳಿತ ಯೋಜನೆಯಡಿಯಲ್ಲಿ ಸಾಮಾನ್ಯ ಸೇವಾ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಕಂಪ್ಯೂಟರ್ ಮತ್ತು ಇಂಟರ್ನೆಟ್ ಪ್ರವೇಶದ ಮೂಲಕ, CSC ಗಳು ಇ-ಆಡಳಿತ, ಆರೋಗ್ಯ, ಶಿಕ್ಷಣ, ಮನರಂಜನೆ, ಟೆಲಿಮೆಡಿಸಿನ್ ಮತ್ತು ಇತರ ಸರ್ಕಾರಿ ಮತ್ತು ಖಾಸಗಿ ಸೇವೆಗಳಂತಹ ವಿವಿಧ ವಿಷಯಗಳ ಕುರಿತು ಮಲ್ಟಿಮೀಡಿಯಾ ವಿಷಯವನ್ನು ರಚಿಸುತ್ತಿವೆ.
  • ಪ್ರಸ್ತುತ, ದೈನಂದಿನ ಸಕ್ರಿಯ ಇಂಟರ್ನೆಟ್ ಬಳಕೆದಾರರ ಸಂಖ್ಯೆ 10-15 ಮಿಲಿಯನ್ ದೈನಂದಿನ ಬಳಕೆದಾರರಿಂದ 300 ಮಿಲಿಯನ್ ದಾಟಿದೆ..

ಡಿಜಿಟಲ್ ಇಂಡಿಯಾದ ಕುರಿತ ಹೆಚ್ಚಿನ ಮಾಹಿತಿಯನ್ನು ಮತ್ತು ಅದರ ಯಶಸ್ಸಿನ ಸಂಪೂರ್ಣ ವರದಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.

https://pib.gov.in/PressReleaseIframePage.aspx?PRID=1885962

10 – Gold Monetisation ಯೋಜನೆ

ಭಾರತೀಯ ಕುಟುಂಬಗಳಲ್ಲಿ ಟನ್‌ಗಟ್ಟಲೆ ಚಿನ್ನವಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಚಿನ್ನವನ್ನು ಕೊಂಡಂತೆಲ್ಲ ಶೇಖರಣೆಯಾಗುತ್ತಲೇ ಇರುತ್ತದೆ. ಹೀಗೆ ಬಳಕೆಯಾಗದೆ ಮನೆಯಲ್ಲಿ ನಿಷ್ಕ್ರಿಯವಾಗಿರುವ ಚಿನ್ನವನ್ನು ಉತ್ಪಾದಕ ಆಸ್ತಿಯಾಗಿ ಪರಿವರ್ತಿಸಲು ಮೋದಿ ಸರ್ಕಾರವು ನವೆಂಬರ್ 4, 2015 ರಂದು ಈ ಯೋಜನೆಯನ್ನು ಜಾರಿಗೆ ತಂದಿತು. ಚಿನ್ನದ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯ ಚಿನ್ನವನ್ನು ಉತ್ಪಾದಕವಾಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು.

ಈ ಹಿಂದೆ ಜಾರಿಯಲ್ಲಿದ್ದ ಚಿನ್ನದ ಠೇವಣಿ ಯೋಜನೆ 1999 ಮತ್ತು ಗೋಲ್ಡ್ ಮೆಟಲ್ ಲೋನ್ ಯೋಜನೆ 1998 ಬದಲಿಗೆ 2015-16ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಚಿನ್ನದ ನಗದೀಕರಣ ಯೋಜನೆ ಪರಿಚಯಿಸಿತು. ಈ ಯೋಜನೆಯಡಿ, ಚಿನ್ನವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿ, ಮಾಸಿಕ ಆಧಾರದ ಮೇಲೆ ಬಡ್ಡಿ ಪಡೆಯಬಹುದು.

ಈ ಯೋಜನೆಗೆ ಯಾರು ಅರ್ಹರು?

ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದಂತೆ ಚಿನ್ನದ ಹಣಗಳಿಸುವ ಯೋಜನೆಗೆ ಕೆಳಗಿನವರು ಅರ್ಹರಾಗಿದ್ದಾರೆ.

  • ದೇಶದ ಜನರು
  • ಹಿಂದು ಅವಿಭಕ್ತ ಕುಟುಂಬಗಳು
  • ಖಾಸಗಿ ಮಾಲೀಕತ್ವದ ಕಂಪನಿಗಳು
  • ಟ್ರಸ್ಟ್ ಗಳು (ಮ್ಯೂಚುಯಲ್ ಫಂಡ್‌ಗಳು, ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು SEBI ಅಡಿಯಲ್ಲಿ ನೋಂದಾಯಿಸಿರಬೇಕು).
  • ಚಾರಿಟಬಲ್ ಟ್ರಸ್ಟ್ ಗಳು
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು
Share Now