ದಿನಾಂಕ 17/03/2024 ರಂದು ಹಡಗಲಿ ಮಂಡಲದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪರಿಚಯಾತ್ಮಕ ಸಭೆ ಮತ್ತು ಮಹಿಳಾ ಸಮಾವೇಶದ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ “ಡಾ. ಸುವರ್ಣ ಆರುಂಡಿ ನಾಗರಾಜ್” ರವರು ಎಲ್ಲರನ್ನೂ ಪರಸ್ಪರ ಪರಿಚಯ ಮಾಡಿಕೊಳ್ಳುವುದರೊಂದಿಗೆ ಮಹಿಳಾ ಸಮಾವೇಶದ ಸಿದ್ಧತೆಯ ಬಗ್ಗೆ ಪೂರ್ವಭಾವಿಯಾಗಿ ಅನೇಕ ಮಾಹಿತಿಯನ್ನು ನೀಡಿದರು. ಈ ವೇಳೆ ಅವರು ಮಾತನಾಡಿ “ನಮಗೆ ಕೊಟ್ಟಿರುವುದು ಕೇವಲ ಅಧಿಕಾರವಲ್ಲ ಒಂದು ಜವಾಬ್ದಾರಿ ಎಂಬುದನ್ನು ಅರಿತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ, ಚುನಾವಣೆಯ ನಮ್ಮ ಕಾರ್ಯವಿಧಾನಗಳನ್ನು ನೋಡಿ ಶಾಸಕರಿಗೂ ಮತ್ತು ನಮ್ಮ ಹಿರಿಯರಿಗೆ ನಮ್ಮ ಬಗ್ಗೆ ಹೆಮ್ಮೆ ಮೂಡಬೇಕು ಈ ಮೂಲಕ ನಾವು ಮತ್ತೊಮ್ಮೆ ನರೇಂದ್ರ ಮೋದಿಜಿ ಅವರನ್ನು ಪ್ರಧಾನ ಮಂತ್ರಿ ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿದರು”.
ಪಕ್ಷ ಸಂಘಟನೆಯಲ್ಲಿ ನಾವು ನಿರ್ವಹಿಸಬೇಕಾದ ಕರ್ತವ್ಯಗಳು, ಕಾಂಗ್ರೆಸ್ ನ ಪೊಳ್ಳು ಗ್ಯಾರಂಟಿಗಳ ಬಗ್ಗೆ ಹಿರಿಯರಾದ ಭಾಗ್ಯಮ್ಮ ಚನ್ನವೀರಮ್ಮ ವಿಜಯಲಕ್ಷ್ಮಿ ಎಚ್. ಎಮ್ ಹಾಗೂ ಹೂವಿನಹಡಗಲಿ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಲಕ್ಷ್ಮಿಬಾಯಿ ಅವರು ಮಾತನಾಡಿದರು.
ಜಿಲ್ಲಾ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿಗಳಾದ ಮೀರಾಬಾಯಿಯವರು ಪ್ರಾಸ್ತಾವಿಕ ನುಡಿಯಲ್ಲಿ ಸಿಕ್ಕ ಅವಕಾಶಗಳನ್ನು ನಾವು ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ ಬೆಳೆಯಲು ಸಾಧ್ಯ, ಹಾಗೆ ನಮ್ಮ ನಡೆ ನುಡಿಗಳು ಮಾದರಿಯಾಗಿದ್ದು ಶಿಸ್ತನ್ನು ಪಾಲಿಸಬೇಕು ಈ ಮೂಲಕ ಪಕ್ಷದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು. ಸಭೆಯಲ್ಲಿದ್ದ ಅನೇಕ ಪದಾಧಿಕಾರಿಗಳು ತಮ್ಮದೇ ನಾಯಕತ್ವದ ಸಂಘ ಸಂಸ್ಥೆಗಳಲ್ಲಿ ಪಾಲ್ಗೊಂಡಿದ್ದು ತಾವು ಅನುಸರಿಸಬಹುದಾದ ಅನೇಕ ಕ್ರಮಗಳ ಬಗ್ಗೆ ತಿಳಿಸುವ ಮೂಲಕ ತಮ್ಮ ತಮ್ಮ ಪರಿಚಯವನ್ನು ಮಾಡಿಕೊಂಡಿದ್ದು ಗಮನಾರ್ಹವಾದ ವಿಷಯವಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ಹೂವಿನಹಡಗಲಿ ಮಂಡಲದ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಮಮತಾ ನಿರ್ವಹಿಸಿದರೆ ವಂದನಾರ್ಪಣೆಯನ್ನು ಮತ್ತೊಬ್ಬ ಪ್ರಧಾನ ಕಾರ್ಯದರ್ಶಿಯಾದ ಸೌಮ್ಯ ಅವರು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಹೂವಿನಹಡಗಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ್, ವಿಸ್ತಾರಕರಾದ ಕಾಮೇಶ್, ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ಚನ್ನವೀರಮ್ಮ, ಪುಷ್ಪ ಕಾಲ್ವಿ, ಅಮೃತ ರವಿ ಹಾಗೂ ಮಹಿಳಾ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.