ದಿನಾಂಕ 15/03/2024ರಂದು  ಭಾರತೀಯ ಜನತಾ ಪಕ್ಷದ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಿ.ಶ್ರೀರಾಮುಲು ಅವರು ಹೊಸಪೇಟೆಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಪತ್ರಕರ್ತರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
 
ನಂತರ ಹೊಸಪೇಟೆಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಎಲ್ಲಾ ಮಂಡಲದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಜಿಲ್ಲೆಯ ಎಲ್ಲಾ ಮೋರ್ಚಾಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನದ ಸಂಚಾಲಕರು ಹಾಗೂ ಸಹ ಸಂಚಾಲರು ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ಮುಂಬರುವ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದರು.
 
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಚನ್ನಬಸವನಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷರಾದ ಸುಭಾಷ್, ಸಂಜೀವ್ ರೆಡ್ಡಿ,ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಕೊಟ್ರೇಶ್ ಕಿಚಿಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆಯಾದ ಆರುಂಡಿ ಸುವರ್ಣಾ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಬಸವರಾಜ ಕರ್ಕಿಹಳ್ಳಿ, ವಕೀಲರಾದ ವಿನಾಯಕಸ್ವಾಮಿ ಹಾಗೂ ಮತ್ತಿತರು ಪಾಲ್ಗೊಂಡಿದ್ದರು.

On 15/03/2024, Bharatiya Janata Party’s BJP candidate for Ballari Lok Sabha Constituency, B. Sreeramulu attended a press conference at Press House, Hospet and answered many questions from journalists.

Later, at the district BJP office in Hospet, he discussed the preparations for the upcoming elections with all the presidents, vice presidents, secretaries, presidents, vice presidents, social network and information technology coordinators, co-conveners and party workers of all the fronts of the district.

On this occasion, Vijayanagar District BJP President Channabasavanagowda Patil, District General Secretary K.S. Raghavendra, district vice-presidents Subhash, Sanjeev Reddy, Yuva Morcha district president Kotresh Kichidi, Mahila Morcha district president Arundi Suwarna, district media coordinator Basavaraja Karkihalli, lawyers Vinayak and Swamy and others were present.

Share Now