ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 92,316 ನಕಲಿ ಮತದಾರರಿದ್ದು, ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಡಳಿತಕ್ಕೆ ದಾಖಲೆ ಸಮೇತ ದೂರು ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ಕುಮಾರ್ ಮೋಕಾ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂಪ್ಲಿ ಕ್ಷೇತ್ರದಲ್ಲಿ 14,563 ನಕಲಿ ಮತದಾರರು, ಬಳ್ಳಾರಿ ನಗರ 14,563, ಬಳ್ಳಾರಿ ಗ್ರಾಮೀಣ 18,769, ಸಿರುಗುಪ್ಪ 25,970 ಹಾಗೂ ಸಂಡೂರು ಕ್ಷೇತ್ರದಲ್ಲಿ 15,400 ನಕಲಿ ಮತದಾರರಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದರು
‘ಕಾಂಗ್ರೆಸ್ ಸರ್ಕಾರ ₹1.5 ಲಕ್ಷ ಕೋಟಿ ಸಾಲ ಮಾಡಿ ಬಜೆಟ್‌ ಮಾಡಿದೆ. ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಕೇವಲ ₹52 ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದ್ದಾರೆ. ಅಭಿವೃದ್ಧಿ ಗೌಣವಾಗಿದೆ. ಅನುದಾನ, ಅಭಿವೃದ್ಧಿಯಿಲ್ಲದೆ ಕಾಂಗ್ರೆಸ್ ಶಾಸಕರು ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲದಂತಾಗಿದೆ’ ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಹೇಮಲತಾ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಭದ್ರವಾಡಿ ಚಂದ್ರು, ಮಹಿಳಾ ಘಟಕದ ಅಧ್ಯಕ್ಷೆ ಸುಗುಣ ಇದ್ದರು.

BJP district unit president Anil Kumar Moka said that there are 92,316 fake voters in the five assembly constituencies of the district and a complaint along with documents will be submitted to the district administration seeking action.

Speaking at a press conference held at the party office on Wednesday, he said, ‘There are 14,563 fake voters in Kampli constituency, 14,563 in Bellary City, 18,769 in Bellary Rural, 25,970 in Siruguppa and 15,400 in Sandur constituency.

This will be brought to the notice of the Collector,’ he said, The Congress government made a budget of ₹1.5 lakh crore. Only 52 thousand crores have been earmarked for the development of the state in the budget. Development is secondary. It is as if Congress MLAs cannot walk on the streets without grants and development,’ he quipped.

Vidhan Parishad members YM Satish, Hemalatha, former MLA G. Somasekhara Reddy, Bhadravadi Chandru, women’s unit president Suguna were present.

Share Now